ತಿರುವನಂತಪುರಂ: ಬೇಸಿಗೆಯ ಬಿಸಿಗೆ ಕೇರಳ ತತ್ತರಿಸಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಉತ್ತರದ ಜಿಲ್ಲೆಗಳಾದ ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಹವಾಮಾನ ಇಲಾಖೆ ವಿಶೇಷ ಎಚ್ಚರಿಕೆಗಳನ್ನೂ ನೀಡಿದೆ.
ಕೇಂದ್ರ ಹವಾಮಾನ ಇಲಾಖೆ ಪ್ರಕಾರ, ಈ ಜಿಲ್ಲೆಗಳಲ್ಲಿ ಇಂದು ಗರಿಷ್ಠ ತಾಪಮಾನ 36 ರಿಂದ 39 ಡಿಗ್ರಿ ಸೆಲ್ಸಿಯಸ್‍ಗೆ ಏರಿಕೆಯಾಗಲಿದೆ ಎಂಬ ಸೂಚನೆ ಬಹುತೇಕ ನಿಜವಾಗಿದೆ. ಇದು ಸಾಮಾನ್ಯ ಬೇಸಿಗೆ ಬಿಸಿಗಿಂತ ಮೂರು ಡಿಗ್ರಿಯಿಂದ ಐದು ಡಿಗ್ರಿ ಹೆಚ್ಚು.
ನಿನ್ನೆ ಪಾಲಕ್ಕಾಡ್‍ನಲ್ಲಿ ಗರಿಷ್ಠ ತಾಪಮಾನ 38.5 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಕೋಝಿಕ್ಕೋಡ್-35.2, ಕೊಚ್ಚಿ-33.4, ಆಲಪ್ಪುಳ-34.2 ಮತ್ತು ತಿರುವನಂತಪುರಂ-32.8. ಕಳೆದ ಕೆಲವು ದಿನಗಳಿಂದ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿ ಅತಿ ಹೆಚ್ಚು ವರದಿಯಾಗಿದೆ. ಜಿಲ್ಲೆಯ ನದಿಗಳು ಬತ್ತಿ ಹೋಗುತ್ತಿವೆ. ಬೆಳೆ ಒಣಗುವುದು ್ನ ತಡೆಯಲು ಯಾಂತ್ರೀಕೃತ ನೀರಾವರಿ ಆರಂಭಿಸಲಾಗಿದೆ.
ಕಣ್ಣೂರಿನಲ್ಲಿ ರಾಜ್ಯದಲ್ಲಿ ಈ ವರ್ಷ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲೂ ಕಳೆದ ಎರಡು ವಾರಗಳಿಂದ ಅಧಿಕ ತಾಪಮಾನ ದಾಖಲಾಗಿದೆ. ಉತ್ತರ ಕೇರಳದಲ್ಲಿ ವಾರ್ಷಿಕ ಮಳೆ ಶೇ.40-45ರಷ್ಟು ಕಡಿಮೆಯಾಗಿದೆ. ಹವಾಮಾನ ಸಂಶೋಧನಾ ಕೇಂದ್ರದ ಪ್ರಕಾರ, ರಾಜ್ಯದಲ್ಲಿ ಮಳೆ ಕಡಿಮೆಯಾದ ಕಾರಣ ಬಿಸಿಲಿನ ತಾಪ ಹೆಚ್ಚಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು ಮತ್ತು ಹೊರಗೆ ಕೆಲಸ ಮಾಡುವವರು ಬಿಸಿಲು ಬೀಳದಂತೆ ಎಚ್ಚರಿಕೆ ವಹಿಸಬೇಕು ಮತ್ತು ಬಿಸಿಲಿನ ಸಮಯದಲ್ಲಿ ಹೊರಗೆ ಹೋಗಬಾರದು ಎಂದು ಸೂಚಿಸಿದ್ದಾರೆ.
ಈ ಮಧ್ಯೆ ರಾಜ್ಯದಲ್ಲಿ ಹೆಚ್ಚಳಗೊಂಡ ಕಾಂಕ್ರೀಟ್ ಕಟ್ಟಡ, ಪಾರಂಪರಿಕ ಕಾಡಿನ ಕೊರತೆ, ರಬ್ಬರ್ ಸಹಿತ ಉದ್ಯಮ ಲಕ್ಷ್ಯದ ಮರಗಳ ಹೆಚ್ಚಳದಂತಹ ಸವಾಲನ್ನು ತಾಪಮಾನ ಏರಿಕೆಗೆ ಕಾರಣವಾಗಿ ಸರ್ಕಾರವಾಗಲಿ ಅಧಿಕಾರಿಗಳಾಗಲಿ ಪರಿಗಣಿಸದಿರುವುದು ಅಚ್ಚರಿಮೂಡಿಸಿದೆ.
ಬೇಸಿಗೆಯ ಉರಿಬಿಸಿಲಿಗೆ ಕೇರಳ ತತ್ತರ
0
ಮಾರ್ಚ್ 04, 2023