ತಿರುವನಂತಪುರಂ: ಇನ್ಪೋಸಿಸ್ ಸಂಸ್ಥಾಪಕಿ, ಪದ್ಮಶ್ರೀ ಪುರಸ್ಕøತೆ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಸಕಲ ಸೌಲಭ್ಯ, ಸಹಾಯ ಲಭ್ಯವಿದ್ದರೂ ಯಾರ ಗಮನಕ್ಕೂ ಬಾರದೆ ಏಕಾಂಗಿಯಾಗಿ ಪೊಂಗಾಲದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ.
ಇದೊಂದು ವಿಭಿನ್ನ ಅನುಭವ ಮತ್ತು ನಾರಿ ಶಕ್ತಿ ಎಂದು ಸುಧಾಮೂರ್ತಿ ಹೇಳಿರುವÀರು. ಇಲ್ಲಿ ಸಮಾನತೆಗಾಗಿ ಹೋರಾಟ ಮಾಡದ ಅನೇಕ ಮಹಿಳೆಯರು ಅನೇಕ ಕಡೆಯಿಂದ ಬಂದಿದ್ದಾರೆ ಎಂದರು. ಇಲ್ಲಿ ಜಾತಿ, ಧರ್ಮ, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಮಹಿಳೆಯರು ಒಂದೆಡೆ ಸೇರುತ್ತಾರೆ. ಜೊತೆಯಾಗಿ ಅಡುಗೆ ಮಾಡುತ್ತಿದ್ದೇವೆ ಎಂದೂ ಹೇಳಿದರು.
ಸುಧಾ ಮೂರ್ತಿ ತಯಾರಿಸಿದ ಪೆÇಂಗಲ್ ನ್ನು ನೆರೆದಿದ್ದವರಿಗೆ ಹಂಚಿದರು. ರುಚಿಯ ಬಗ್ಗೆಯೂ ವಿಚಾರಿಸಿದರು. ಇದೇ ವೇಳೆ ಅವರು ಇಲ್ಲಿ ಪೆÇಂಗಲ ಎಂದರೆ ಸಮಾನತೆ ಸಂದೇಶ ನೀಡಿದೆ. ಪರಸ್ಪರ ಅನುಭವ ಹಂಚಿಕೊಳ್ಳುತ್ತಾ, ಅರಿವನ್ನು ವಿಸ್ತರಿಸಿಕೊಳ್ಳುತ್ತ ಪೊಂಗಾಲದಲ್ಲಿ ಪಾಲ್ಗೊಳ್ಳುವುದು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಹೇಳಿದರು. ತಾನು ವಿಶೇಷವಾಗಿ ಯಾವುದಕ್ಕೂ ಪ್ರಾರ್ಥಿಸುವುದಿಲ್ಲ. ಅಟ್ಟುಕಲ್‍ನಲ್ಲಿ ನಡೆದ ಮಹಿಳೆಯರ ಈ ದೊಡ್ಡ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಸುಧಾ ಮೂರ್ತಿ ಅವರ ಪುತ್ರಿ ಅಕ್ಷತಾ ಅವರು ಭಾರತೀಯ ಮೂಲದ ಬ್ರಿಟಿμï ಪ್ರಧಾನಿ ರಿಷಿ ಸುನಕ್ ಅವರನ್ನು ವಿವಾಹವಾದವರು ಎಂಬುದು ಇಲ್ಲಿ ಉಲ್ಲೇಖನೀಯ. ಮುಂದಿನ ತನ್ನ ಬರಹದಲ್ಲಿ ಅಟ್ಟುಕ್ಕಾಲ್ ಪೊಂಗಾಲ ಉತ್ಸವದ ಮಹತ್ವದ ಬಗೆಗೆ ಬರೆಯುವೆ ಮತ್ತು ಭಾಷಣಗಳಲ್ಲಿ ಉಲ್ಲೇಖಿಸುವೆ ಎಂದಿರುವರು.
ಪೊಂಗಲ್ ಮಹಿಳಾ ಸಮಾನತೆಯ ಸಂಕೇತ: ಸುಧಾಮೂರ್ತಿ
0
ಮಾರ್ಚ್ 08, 2023
Tags