ಕಾಸರಗೋಡು: ಪಂಪನ ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ ಅನೇಕ ರಾಜಕೀಯ ಧ್ವನಿಗಳಿದ್ದು, ಕೃಷ್ಣ ಸಂಧಾನ ಮತ್ತು ಭೀಷ್ಮರಿಗೆ ಸೇನಾಧಿಪತ್ಯ ಪಟ್ಟವನ್ನು ಕಟ್ಟುವ ಪ್ರಸಂಗಗಳು ಇದಕ್ಕೆ ಉತ್ತಮನಿದರ್ಶನಗಳಾಗಿವೆ ಎಂದು ಕನ್ನಡದ ಹಿರಿಂiÀವಿದ್ವಾಂಸ, ಸಂಶೋಧಕ,ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ತಿಳಿಸಿದ್ದಾರೆ.
ಅವರು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಆಶ್ರಯದಲ್ಲಿ ಜರುಗಿದ ಕನ್ನಡದ ಓಜ ಪೆರಡಾಲ ಕೃಷ್ಣಯ್ಯ ದತ್ತಿನಿಧಿಉಪನ್ಯಾಸ ನೀಡಿ ಮಾತನಾಡಿದರು. ಭೀಷ್ಮನಿಗೆ ಪಟ್ಟ ಕಟ್ಟುವ ಸಂದರ್ಭ ಕರ್ಣನ ಪ್ರತಿಭಟನೆ ಮತ್ತು ಪ್ರತಿಜ್ಞೆ, ದ್ರೋಣಾಚಾರ್ಯರ ಪ್ರತಿಕ್ರಿಯೆಮತ್ತು ಕುಲದ ಕುರಿತು ನಡೆದ ವಾಗ್ವಾದಗಳೆಲ್ಲವೂ ಸಮಕಾಲೀನ ರಾಜಕೀಯಕ್ಕೆ ಹಿಡಿದ ಕನ್ನಡಿಯಂತಿದೆ ಎಂದು ಅವರು ನುಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಎಸ್ ಅಧ್ಯಕ್ಷತೆ ವಹಿಸಿದರು.
'ಶಬ್ದಸೂರೆ'ಬಿಡುಗಡೆ:
ಈ ಸಂದರ್ಭ ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತಕನ್ನಡ ಪ್ರಾಧ್ಯಾಪಿಕೆ, ಕವಯತ್ರಿ, ಸಂಶೋಧಕಿ ಡಾ.ಯು.ಮಹೇಶ್ವರಿ ಅವರ 'ಶಬ್ದಸೂರೆ' ಕೃತಿಯನ್ನು ಡಾ.ಬಿ.ಎ.ವಿವೇಕ ರೈ ಬಿಡುಗಡೆಗೊಳಿಸಿದರು.
ಡಾ.ಯು.ಮಹೇಶ್ವರಿ ಅವರ ಬರವಣಿಗೆಯಲ್ಲಿ ಅನೇಕ ಒಳನೋಟಗಳಿವೆ ಸುದೀರ್ಘ ಕಾಲದ ಅಧ್ಯಾಪನದಿಂದ ಅನೇಕ ಶಿಷ್ಯರನ್ನು ತಯಾರು ಮಾಡಿದ ಅವರಿಗೆ ಭಾಷೆಯನ್ನು ದುಡಿಸಿಕೊಳ್ಳುವ ಕಲೆ ಕರಗತವಾಗಿದೆ. ಅವರು ನಿಜವಾಗಿಯೂ ಶಬ್ದಸೂರೆ ಮಾಡಿದ ಲೇಖಕಿ ಎಂದು ತಿಳಿಸಿದರು. ಹಿರಿಯ ವಿದ್ವಾಂಸ ಡಾ.ಪಿ.ಶ್ರೀಕೃಷ್ಣ ಭಟ್ ಅವರುಮೊದಲ ಪ್ರತಿಯನ್ನು ಸ್ವೀಕರಿಸಿದರು. ಕನ್ಡಡ ಪ್ರಾಧ್ಯಾಪಿಕೆ ಡಾ.ವೇದಾವತಿ ಎಸ್ ಅವರು ಕೃತಿ ಪರಿಚಯ ಮಾಡಿದರು. ಲೇಖಕಿ ಡಾ.ಯು.ಮಹೇಶ್ವರಿ ಉಪಸ್ಥಿತರಿದ್ದರು.
ಬೆಳ್ಳಿಹಬ್ಬ ದತ್ತಿನಿಧಿ ಉಪನ್ಯಾಸ
ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ವರದರಾಜ ಚಂದ್ರಗಿರಿ ಅವರು 'ರನ್ನ ಚಿತ್ರಿಸಿದ ಭೀಮನ ಪಾತ್ರ'ಎಂಬ ವಿಷಯದಲ್ಲಿ ಮಾತನಾಡಿದರು ವಿಷಯ ಮಂಡಿಸಿದರು
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಎ.ಎಲ್.ಅನಂತಪದ್ಮನಾಭ ಉಪಸ್ಥಿತರಿದ್ದರು. ಈ ಸಂದರ್ಭ ಶ್ರದ್ಧಾ ನಾಯರ್ಪಳ್ಳ ಅವರು ಪಂಪ ರನ್ನರ ನಾಂದಿ ಪದ್ಯಗಳನ್ನು ಹಾಡಿದರು. ಡಾ.ರಾಧಾಕೃಷ್ಣ ಬೆಳ್ಳೂರು ಸ್ವಾಗತಿಸಿ, ಡಾ.ಶ್ರೀಧರ ಏತಡ್ಕ ವಂದಿಸಿದರು.
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ದತ್ತಿನಿಧಿ ಉಪನ್ಯಾಸ, ಕೃತಿ ಬಿಡುಗಡೆ ಸಮಾರಂಭ
0
ಮಾರ್ಚ್ 18, 2023