ಕಾಸರಗೋಡು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಮಿಕರಿಗಾಗಿ ವಿಶೇಷ ಕಾರ್ಯಕ್ರಮ ಬೇಕಲ ಸೇತುವೆ ಬಳಿಯ ಕಾರ್ನಿಷ್ ಕ್ಲಬ್‍ನಲ್ಲಿ ನಡೆಯಿತು. ಕಾಸರಗೋಡು ಜಿಲ್ಲೆಯ ವಿವಿಧ ಸ್ಥಳಗಳನ್ನು ಸ್ವಚ್ಛಗೊಳಿಸುವ ಮತ್ತು ನಿರ್ವಹಿಸುವ 21 ಕ್ಲೀನ್ ಡೆಸ್ಟಿನೇಶನ್ ಉದ್ಯೋಗಿಗಳೊಂದಿಗೆ ಡಿಟಿಪಿಸಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಆಚರಣೆಯನ್ನು ನಡೆಸಿತು.ಕಾಸರಗೋಡು ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ ಆಶ್ರಯದಲ್ಲಿ ಬೇಕಲ ಟೂರಿಸಂ ಫ್ರೆಟರ್ನಿಟಿ, ಕ್ವಾಲಿಟಿ ರೆಸ್ಟೊರೆಂಟ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬೇಕಲ ಕಾರ್ನಿಷ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಸಿ.ಎಚ್ ಕುಞಂಬು ಉದ್ಘಾಟಿಸಿ ಮಾತನಾಡಿ, ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಸಮಾನ ಸ್ಥಾನ ಪಡೆಯಲು ಅರ್ಹರಾಗಿದ್ದು, ಅದನ್ನು ಪಡೆಯಲು ಮಹಿಳೆಯರು ಮಾನಸಿಕವಾಗಿ ಸಿದ್ಧರಾಗಬೇಕು ಎಂದು ತಿಳಿಸಿದರು. ಬೇಕಲ್ ಟೂರಿಸಂ ಫ್ರೆಟರ್ನಿಟಿ ಅಧ್ಯಕ್ಷ ಸೈಫುದ್ದೀನ್ ಕಳನಾಡ್, ಅನೂಪ್, ನಾಸರ್, ಯುವ ಉದ್ಯಮಿ ಅನಸ್ ಮುಸ್ತಫಾ, ಡಿಟಿಪಿಸಿ ಸಿಬ್ಬಂದಿ ಮೋಹನನ್, ಅಂಜನಾ, ಬಿಟಿಒ ಸದಸ್ಯರಾದ ಸಲೀಂ ಬೇಕಲ್ ಮತ್ತು ಸಲೀಂ ಬಿಕೆ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಶುಚಿತ್ವ ಕಾರ್ಮಿಕರಿಗಾಗಿ ವಿಶೇಷ ಕರ್ಯಕ್ರಮ
0
ಮಾರ್ಚ್ 10, 2023
Tags