ಉಪ್ಪಳ: 2023-24ನೇ ವಾರ್ಷಿಕ ಯೋಜನೆ ರೂಪೀಕರಣದ ಅಂಗವಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ಮಟ್ಟದ ‘ಬಾಲ ಗ್ರಾಮ ಸಭೆ’ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ ಶರೀಫ್ ಟಿ.ಎಮ್ ಉದ್ಘಾಟಿಸಿದರು. ಪಂಚಾಯತಿ ಸಿಬ್ಬಂದಿ ಸುನಿಲ್ ಹಾಗೂ ನೀತು ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಬಾಲಾ ಗ್ರಾಮ ಸಭೆಯ ಉದ್ದೇಶ ಮತ್ತು ವಿದ್ಯಾರ್ಥಿಗಳ ಅಗತ್ಯತೆಗಳ ಬಗ್ಗೆ ತಿಳಿಸಿದರು.
ಮುಳಿಂಜ ಶಾಲೆಯಲ್ಲಿ ಬಾಲ ಗ್ರಾಮಸಭೆ
0
ಮಾರ್ಚ್ 04, 2023
Tags