ಕಾಸರಗೋಡು: ವಿದ್ಯಾನಗರ ಚಿನ್ಮಯ ಕಾಲೇಜಿನ ಜಯಂತ್ಯುತ್ಸವ'ಕಲಾಂಜಲಿ'ಹಾಗೂ ಪದವಿ ಪ್ರದಾನ ಸಮಾರಂಭವನ್ನು ವಿವಿಧ ಕಲಾ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕಾಸರಗೋಡು ಗುಪ್ತಚರ ವಿಭಾಗ ಡಿವೈಎಸ್ಪಿ ಡಾ.ವಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಅವರು, ಮಾದಕ ದ್ರವ್ಯ ಬಳಕೆ ಮತ್ತು ಅತಿಯಾದ ಮೊಬೈಲ್ ಫೆÇೀನ್‍ಗಳ ಬಳಕೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿದೆ. ಮದಕ ದ್ರವ್ಯದ ಬಳಕೆ ಮತ್ತು ಮೊಬೈಲ್ ದುರುಪಯೋಗದ ಬಗ್ಗೆ ಮಕ್ಕಳಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭ ಕಳೆದ ವರ್ಷ ಶಾಲೆಯಿಂದ ಉತ್ತೀರ್ಣರಾಗಿ ತೆರಳಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಡೆಸಿಕೊಟ್ಟರು. ಚಿನ್ಮಯ ಮಿಷನ್‍ನ ಕಾಸರಗೋಡು ವಲಯದ ಅಧ್ಯಕ್ಷ ಎ ಕೆ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವತಿಯಿಂದ ಡಾ.ಸುಕುಮಾರ್ ಅಯಿಕೋಡ್ ಪ್ರಶಸ್ತಿ ಪುರಸ್ಕøತ ಸಾಹಿತಿ ಚಂದ್ರಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಬಾಲಚಂದ್ರನ್ ಕೆ, ವಕೀಲ ಪಿ.ಕೆ.ವಿಜಯನ್, ಶರಣ್ಯ ರೈ, ಫಾತಿಮತ್ ನೌರೀನ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ವಿ.ರಾಘವನ್ ಸ್ವಾಗತಿಸಿದರು.