HEALTH TIPS

ಅಂಗಾಂಗ ದಾನಕ್ಕೆ ಮುಂದಾಗಿ: ಪ್ರಧಾನಿ ಮನವಿ

 

               ನವದೆಹಲಿ: 'ಒಬ್ಬರ ಜೀವವನ್ನು ಉಳಿಸುವ ಅಂಗಾಂಗ ದಾನಕ್ಕೆ ಜನರು ಹೆಚ್ಚು ಗಮನ ಹರಿಸಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್‌'ನ 99ನೇ ಸಂಚಿಕೆಯಲ್ಲಿ ಭಾನುವಾರ ಮನವಿ ಮಾಡಿದ್ದಾರೆ.

                   'ಅಂಗಾಂಗ ದಾನಕ್ಕೆ ಸರ್ಕಾರವು ಏಕರೂಪದ ನೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಾನ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. 'ತಮ್ಮ ಸಾವಿನ ಬಳಿಕ ಅಂಗಾಂಗ ದಾನ ಮಾಡುವವರನ್ನು ಅಂಗಾಂಗ ಸ್ವೀಕಾರ ಮಾಡುವವರು 'ದೇವರು' ಎಂದೇ ಭಾವಿಸುತ್ತಾರೆ. ಹಾಗಾಗಿ ಹಲವರಿಗೆ ಜೀವ ಮತ್ತು ಬದುಕು ನೀಡುವ ಈ ಕಾರ್ಯಕ್ಕೆ ಜನರಿಂದ ಉತ್ತೇಜನ ದೊರೆಯಬೇಕು' ಎಂದೂ ಅವರು ಹೇಳಿದ್ದಾರೆ.

                 'ಭಾರತದಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಉಂಟಾಗುತ್ತಿರುವುದು ಸಮಾಧಾನಕರ ಅಂಶ' ಎಂದು ಶ್ಲಾಘಿಸಿದ ಮೋದಿ, ಅಗತ್ಯವಿರುವವರು ದೇಶದಲ್ಲಿ ಎಲ್ಲಿ ಬೇಕಾದರೂ ಅಂಗಾಂಗಗಳನ್ನು ಸ್ವೀಕರಿಸಲು ಇದ್ದ ಅಡೆತಡೆಗಳನ್ನು ತೆಗೆದುಹಾಕಲಾಗಿದೆ. ಅಂಗಾಂಗ ದಾನ ಮಾಡಲು 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಾನದಂಡಗಳನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಒಬ್ಬ ಮೃತ ವ್ಯಕ್ತಿಯ ಅಂಗಾಂಗ ದಾನವು 8ರಿಂದ 9 ಜನರಿಗೆ ಸಹಾಯಕವಾಗಬಲ್ಲದು' ಎಂದು ವಿವರಿಸಿದ್ದಾರೆ.

                      'ದೇಶದಲ್ಲಿ 2013ರಲ್ಲಿ ಅಂಗಾಂಗ ದಾನಿಗಳ ಸಂಖ್ಯೆ 5 ಸಾವಿರಕ್ಕಿಂತಲೂ ಕಡಿಮೆ ಇತ್ತು. 2022ರಲ್ಲಿ ಈ ಸಂಖ್ಯೆಯು 15 ಸಾವಿರಕ್ಕೇರಿದೆ'ಎಂದರು.

                ಜನಿಸಿದ 39 ದಿನಗಳ ಬಳಿಕ ಸಾವಿಗೀಡಾದ ತಮ್ಮ ಮಗಳ ಅಂಗಾಂಗಗಳನ್ನು ದಾನ ಮಾಡಿದ ಅಮೃತಸರದ ದಂಪತಿ ಜತೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು, ಅವರ ನಿರ್ಧಾರವನ್ನು ಶ್ಲಾಘಿಸಿದರು.

                  ಕೆಲವೆಡೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿದ ಅವರು, ಈ ಬಗ್ಗೆ ಜನರು ಮುನ್ನೆಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.

                  ಕಾಶಿಯಲ್ಲಿ 'ಕಾಶಿ-ತಮಿಳು ಸಂಗಮಂ' ನಡೆದಿದೆ. ಅಂತೆಯೇ ಏಪ್ರಿಲ್ 17ರಿಂದ 30ರ ತನಕ ಗುಜರಾತ್‌ನ ವಿವಿಧ ಭಾಗಗಳಲ್ಲಿ 'ಸೌರಾಷ್ಟ್ರ- ತಮಿಳು ಸಂಗಮಂ' ನಡೆಯಲಿದೆ ಎಂದು ಮಾಹಿತಿ ನೀಡಿದರು.‌

                       ಮುಂದಿನ ತಿಂಗಳು 'ಮನ್ ಕಿ ಬಾತ್' ಮಾಸಿಕ ಕಾರ್ಯಕ್ರಮದ 100ನೇ ಸಂಚಿಕೆ ನಡೆಯಲಿದ್ದು, ಜನರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆಯೂ ಮೋದಿ ಮನವಿ ಮಾಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries