ಮಂಜೇಶ್ವರ: ಮೀಯಪದವು ಮಾಸ್ಟರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಇದರ ವತಿಯಿಂದ 11 ಜನರ ಅಂಡರ್ ಆರ್ಮ್ ಬ್ರಾಹ್ಮಣರ ಕ್ರಿಕೆಟ್ ಪಂದ್ಯಾಟ ಮೀಯಪದವು ಶಾಲೆಯಲ್ಲಿ ಜರಗಿತು.
ಪಂದ್ಯಾಟವನ್ನು ಕೃಷ್ಣ ಭಟ್ ವಾರಾಣಸಿ ಉದ್ಘಾಟಿಸಿದರು. 10 ತಂಡಗಳು ಭಾಗವಹಿಸಿದ ಕ್ರೀಡಾಕೂಟದಲ್ಲಿ ಪ್ರಥಮ ಬಹುಮಾನವನ್ನು ಸೋಮನಾಥೇಶ್ವರಿ ಅಳದಂಗಡಿ, ದ್ವಿತೀಯ ಬಹುಮಾನವನ್ನು ಮಧೂರು ಫ್ರೆಂಡ್ಸ್ ಹಾಗೂ ತೃತೀಯ ಬಹುಮಾನವನ್ನು ವಿಪ್ರ ಬಾಯ್ಸ್ ಮೂಡಬಿದ್ರೆ ಪಡೆದುಕೊಂಡರು.ಸಂಜೆ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ರಾಧಾಕೃಷ್ಣ ಭಟ್, ಕ್ಲಬ್ ನ ಗೌರವ ಸಲಹೆಗರ ಜನಾರ್ಧನ.ಎಸ್ ಹಾಗೂ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬ್ರಾಹ್ಮಣರ ಕ್ರಿಕೆಟ್ ಪಂದ್ಯಾಟ
0
ಮಾರ್ಚ್ 20, 2023
Tags