ತಿರುವನಂತಪುರಂ: ಶಾಸಕ ಎಲ್ದೋಸ್ ಕುನ್ನಪ್ಪಿಳ್ಳಿ ಅವರ ಜಾಮೀನು ರದ್ದುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ನಡೆದ ಪಕ್ಷದ ಸರ್ವಸದಸ್ಯರ ಸಭೆಯಲ್ಲಿ ಶಾಸಕರು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯ ಸೂಚಿಸಿದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಭಾಗವಹಿಸಿದ್ದಾರೆ ಎಂದು ಸರ್ಕಾರವು ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದೆ. ಜಾಮೀನು ಷರತ್ತುಗಳನ್ನು ಶಾಸಕ ಉಲ್ಲಂಘಿಸಿದ್ದಾರೆ ಎಂದು ಪೆÇಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಆ ಬಳಿಕ ನ್ಯಾಯಾಲಯದಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ತಿರುವನಂತಪುರಂ ಹೆಚ್ಚುವರಿ ¸ಷÀನ್ಸ್ ನ್ಯಾಯಾಲಯ ಎಲ್ಡೋಸ್‍ಗೆ ಕಠಿಣ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಾಲಯದ ಅನುಮತಿಯಿಲ್ಲದೆ ಕೇರಳವನ್ನು ತೊರೆಯಬಾರದು ಮತ್ತು ದೂರುದಾರ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ನ್ಯಾಯಾಲಯದ ಅನುಮತಿ ಪಡೆಯದೇ ರಾಯಪುರದಲ್ಲಿ ನಡೆದ ಕಾಂಗ್ರೆಸ್ ಸರ್ವಸದಸ್ಯರ ಅಧಿವೇಶನದಲ್ಲಿ ಎಲ್ದೋಸ್ ಭಾಗವಹಿಸಿದ್ದರು ಎಂದು ಪೆÇಲೀಸ್ ವರದಿಯಲ್ಲಿ ತಿಳಿಸಲಾಗಿದೆ. ವರದಿಯು ಎಲ್ಡೋಸ್ ಅವರ ಪೋನ್ ಕರೆ ದಾಖಲೆಗಳನ್ನು ಒಳಗೊಂಡಿದೆ.
ಸೆಪ್ಟೆಂಬರ್ 28 ರಂದು ತಿರುವನಂತಪುರಂ ನಿವಾಸಿಯೊಬ್ಬರು ಎಲ್ಡೋಸ್ ಕುನ್ನಪ್ಪಿಳ್ಳಿ ತನಗೆ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ವರದಿ ಮಾಡಿದ್ದರು. ಕುಡಿದು ಮನೆಗೆ ಬಂದು ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರೆಸಾರ್ಟ್‍ಗೆ ಕರೆದೊಯ್ದು ಥಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಿರುವನಂತಪುರಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅಕ್ಟೋಬರ್ 20 ರಂದು ಎಲ್ಡೋಸ್‍ಗೆ ನಿರೀಕ್ಷಣಾ ಜಾಮೀನು ನೀಡಿತು. ಜಾಮೀನು ಮಂಜೂರಾತಿ ವಿರುದ್ಧ ಸರಕಾರ ಮತ್ತು ದೂರುದಾರರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಜಾಮೀನು ಷರತ್ತುಗಳನ್ನು ಧಿಕ್ಕರಿಸಿ ಪಕ್ಷದ ಪೂರ್ಣ ಸಭೆಗೆ ಹಾಜರಾದ ಎಲ್ಡೋಸ್ : ಜಾಮೀನು ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆಹೋಗಲಿರುವ ಸರ್ಕಾರ
0
ಮಾರ್ಚ್ 01, 2023