ಕಾಸರಗೋಡು: ಅಡುಗೆ ಅನಿಲ ಬೆಲೆಯಲ್ಲಿ ಉಂಟಾಗಿರುವ ಗಣನೀಯ ದರ ಏರಿಕೆ ವಿರೋಧಿಸಿ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ಕಾಸರಗೋಡು ಮುಖ್ಯ ಅಂಚೆ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು. ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಸಿ.ಬಿಜುಲಾಲ್ ಧರಣಿ ಉದ್ಘಾಟಿಸಿ ಇಂಧನ ಕಂಪನಿಗಳು ವರ್ಷಕ್ಕೆ ಶೇ. 165ರಷ್ಟು ಏರಿಕೆ ಮಾಡುವ ಮೂಲಕ ಕಂಪನಿಗಳ ವಾರ್ಷಿಕ ಆದಾಯ 17,000 ಕೋಟಿಯಿಂದ 50,000 ಕೋಟಿ ರೂ.ವರೆಗೆ ಹೆಚ್ಚಿಸಿಕೊಂಡಿದೆ. ಸರ್ಕಾರದ ಅಸಹಜ ರೀತಿಯ ಬೆಲೆ ಏರಿಕೆ ನೀತಿಯಿಂದ ಹೋಟೆಲ್ ಉದ್ಯಮವನ್ನು ಮುಚ್ಚಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಅಬ್ದುಲ್ಲಾ ತಾಜ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಕಾರ್ಯದರ್ಶಿ ನಾರಾಯಣ ಪೂಜಾರಿ, ಕೋಶಾಧಿಕಾರಿ ರಾಜನ್ ಕಲಕಾರ, ರಾಜ್ಯ ಕಾರ್ಯದರ್ಶಿಗಳಾದ ಸಿಲ್ ಹಾದ್, ಮಹಮ್ಮದ್ ಗಜಾಲಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸತ್ಯನಾಥನ್ ಬೋವಿಕಾನಂ, ಅಜೇಶ್ ನುಳ್ಳಿಪಾಡಿ, ಜಿಲ್ಲಾ ಕಾರ್ಯಾಧ್ಯಕ್ಷ ಶಂಸುದ್ದೀನ್ ಕಾಞಂಗಾಡ್, ಕಾಸರಗೋಡು ಘಟಕದ ಅಧ್ಯಕ್ಷ ವಸಂತಕುಮಾರ್ ಉಪಸ್ಥಿತರಿದ್ದರು.
ಇಂಧನ ಕಂಪನಿಗಳಿಂದ ಹಗಲು ದರೋಡೆ-ಅಸೋಸಿಯೇಶನ್
0
ಮಾರ್ಚ್ 24, 2023