ತಿರುವನಂತಪುರಂ: ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕೇರಳದ ಏಕೈಕ ಸ್ವತಂತ್ರ ಸಂಸ್ಥೆ ಲೋಕಾಯುಕ್ತದ ಅಂತ್ಯಕ್ರಿಯೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈಗೆತ್ತಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ಕೈವಾಡಗಳಿವೆ. ಕೆಪಿಸಿಸಿ ಅಧ್ಯಕ್ಷರು ಈ ಹಿಂದೆಯೇ ಈ ಬಗ್ಗೆ ಧ್ವನಿ ಎತ್ತಿದ್ದು, ಈ ಹಿಂದೆ ಮಾಡಿದ್ದ ಆರೋಪಗಳು ನಿಜವೆಂದು ಸಾಬೀತಾಗಿದೆ ಎಂದು ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ ಅಧ್ಯಕ್ಷ ಕೆ. ಸುಧಾಕರನ್ ಹೇಳಿದರು.
ಪರಿಹಾರ ನಿಧಿಯ ತೀರ್ಪು ಪ್ರಕರಣವನ್ನು ಪೂರ್ಣ ಪೀಠಕ್ಕೆ ಬಿಟ್ಟಿರುವ ಕುರಿತು ಅವರು ಪ್ರತಿಕ್ರಿಯಿಸಿದರು.
ಅಕ್ರಮ ತೀರ್ಪಿನಿಂದ ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಕೊರಳು ನೂಕಿ ಹೊರ ಹಾಕುವ ಮುನ್ನ ಮಾನ ಮರ್ಯಾದೆಯಾದರೂ ಉಳಿದಿದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಿ ಹೊರನಡೆಯಬೇಕು. ಮುಖ್ಯಮಂತ್ರಿಯನ್ನು ಉಳಿಸಲು ಹಲವರು ಟೊಂಕಕಟ್ಟಿ ಇಳಿದಿದ್ದಾರೆ ಎಂಬುದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ ಎಂದವರು ತಿಳಿಸಿದರು.
ಅರ್ಜಿಯನ್ನು ಲೋಕಾಯುಕ್ತರು ಇಂದು ಪರಿಗಣಿಸಿ ಅರ್ಜಿಯಲ್ಲಿನ ಆರೋಪಗಳ ಸ್ಥಿತಿಗತಿಗಳ ಬಗ್ಗೆ ದ್ವಿಸದಸ್ಯ ಪೀಠವು ಭಿನ್ನಾಭಿಪ್ರಾಯ ಹೊಂದಿದ್ದರಿಂದ ತೀರ್ಪು ಪೂರ್ಣ ಪೀಠಕ್ಕೆ ಬಿಡಲಾಯಿತು.
ಆದರೆ 2019ರಲ್ಲಿ ನ್ಯಾಯಮೂರ್ತಿ ಪಿಯಸ್ ಸಿ. ಕುರಿಯಾಕೋಸ್, ನ್ಯಾಯಮೂರ್ತಿ ಕೆ.ಪಿ.ಬಾಲಚಂದ್ರನ್ ಮತ್ತು ನ್ಯಾಯಮೂರ್ತಿ ಎ.ಕೆ.ಬಶೀರ್ ಅವರನ್ನೊಳಗೊಂಡ ಪೂರ್ಣ ಪೀಠವು ವಿಚಾರಣೆಯನ್ನು ನಡೆಸಿತು. ಈಗಿನ ಲೋಕಾಯುಕ್ತರು ಪಿಣರಾಯಿ ವಿಜಯನ್ ಅವರನ್ನು ಉಳಿಸಲು ಅಂದಿನ ಲೋಕಾಯುಕ್ತರ ನಿರ್ಧಾರವನ್ನು ಪ್ರಶ್ನಿಸಿದ್ದು, ಈಗಿನ ಸವಾಲಿಗೆ ಕಾರಣವಾಯಿತು.
2022ರಲ್ಲಿ ಪೂರ್ಣಗೊಳ್ಳಬೇಕಿದ್ದ ವಿಚಾರಣೆಯ ತೀರ್ಪು ಒಂದು ನಿಮಿಷದಲ್ಲಿ ಬಗೆಹರಿಯಬಹುದಾಗಿದ್ದ ಭಿನ್ನಾಭಿಪ್ರಾಯದಿಂದಾಗಿ ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿತು. ಹೈಕೋರ್ಟ್ ಮೂರನೇ ದಿನದಲ್ಲಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದರಿಂದ ಕನಿಷ್ಠ ಈ ತೀರ್ಪು ನೀಡಲಾಗಿದೆ. ಇದರ ವಿರುದ್ಧ ಕಠಿಣ ಕಾನೂನು ಹೋರಾಟ ಮುಂದುವರಿಯಲಿದೆ. ಹಿಂದಿನ ಲೋಕಾಯುಕ್ತರ ಪೂರ್ಣ ಪೀಠ ಮತ್ತು ಈಗ ಮೂರನೇ ಒಂದು ಭಾಗದಷ್ಟು ಲೋಕಾಯುಕ್ತರು ಸರ್ಕಾರದ ವಿರುದ್ಧ ನಿಲುವು ತಳೆದಿರುವುದು ಈ ಪ್ರಕರಣಕ್ಕೆ ಪ್ರಬಲ ಅಸ್ತ್ರವಾಗಲಿದೆ ಎಂದು ಸುಧಾಕರನ್ ಹೇಳಿದರು.
ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ; ಘನತೆ ಉಳಿದಿದ್ದರೆ ರಾಜೀನಾಮೆ ನೀಡಬೇಕು:ಕೆ. ಸುಧಾಕರನ್
0
ಮಾರ್ಚ್ 31, 2023