ಪೆರ್ಲ:: ಮಂಜೇಶ್ವರ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಮಂಜೂರು ಮಾಡುವುದಾಗಿ ಕಂದಾಯ ವಸತಿ
ಸಚಿವ ಕೆ.ರಾಜನ್ ಘೋಷಿಸಿದರು.
ಮಂಜೇಶ್ವರ ತಾಲೂಕಿನ ಪಡ್ರೆ ಗ್ರಾಮದಲ್ಲಿ ನಿರ್ಮಿಸಲಾದ
ಡಿಜಿಟಲ್ ಗ್ರಾಮ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಕಾಟುಕುಕ್ಕೆಯಿಂದ ಬೇರ್ಪಡಿಸಿ ಪಡ್ರೆಯಲ್ಲಿ ಗ್ರಾಮ ಕಛೇರಿ ನಿರ್ಮಾಣಕ್ಕೆ ಮುಂದಾದ
ಪಿ.ಎಸ್.ಕಡಂಬಳಿತ್ತಾಯ ಹಾಗು 10 ಸೆಂಟ್ಸ್ ಜಾಗ ನೀಡಿದ ಸಹಕರಿಸಿದ ರಿಷಿಕೇಶ್ ಅವರನ್ನು
ಸಚಿವರು ಸನ್ಮಾನಿಸಿದರು. ಗ್ರಾಮ ಕಚೇರಿ ಪಿಡಬ್ಲ್ಯೂಡಿ ಕಟ್ಟಡ ಇಲಾಖಯು ಡಿಜಿಟಲ್ ಗ್ರಾಮ
ಕಚೇರಿ ನಿರ್ಮಿಸಿರುವುದು. ಗ್ರಾಮ ಕಛೇರಿ ಕಟ್ಟಡದ ಜೊತೆಗೆ ಕುಡಿಯುವ ನೀರಿನ
ಸೌಲಭ್ಯವನ್ನು ಇಲ್ಲಿ ಒದಗಿಸಲಾಗಿದೆ.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಎಡಿಎಂ
ಎ.ಕೆ.ರಾಮೇಂದ್ರನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್, ಎಣ್ಮಕಜೆ
ಪಂಚಾಯತ್ ಅಧ್ಯಕ್ಷ ಜೆ.ಎಸ್.ಸೋಮಶೇಖರ, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್
ಅಡ್ಕಸ್ಥಳ, ಬ್ಲಾಕ್ ಪಂಚಾಯತ್ ಸದಸ್ಯ ಕೆ.ಬಟ್ಟು ಶೆಟ್ಟಿ, ವಾರ್ಡ್ ಸದಸ್ಯರಾದ
ಎಂ.ರಾಮಚಂದ್ರ, ನರಸಿಂಹಪೂಜಾರಿ, ಇಂದಿರಾ, ಉಷಾಕುಮಾರಿ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ
ಪಿ.ಕೆ.ಮಂಜುನಾಥ, ಚಂದ್ರಾವತಿ, ಕೆ.ಪಿ.ಮುನೀರ್ ಉಪ್ಪಳ, ಪತ್ತಡ್ಕ ಗಣಪತಿ ಭಟ್
ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್
ಸ್ವಾಗತಿಸಿ, ಕಾಸರಗೋಡು ಆರ್‌ಡಿಒ ಅತುಲ್ ಸ್ವಾಮಿನಾಥ್ ವಂದಿಸಿದರು.