ನವದೆಹಲಿ: 14 ವರ್ಷದ ಬಾಲಕಿಯೊಬ್ಬಳು ಪರೀಕ್ಷೆಯನ್ನು ಸರಿಯಾಗಿ ಬರೆಯದಿದ್ದ ಕಾರಣ ಬ್ಲೇಡ್‌ನಿಂದ ತನಗೆ ತಾನೇ ಹಾನಿ ಮಾಡಿಕೊಂಡು, ಲೈಂಗಿಕ ಕಿರುಕುಳದ ಸುಳ್ಳು ಕಥೆ ಸೃಷ್ಠಿ ಮಾಡಿರುವ ಘಟನೆ ಇಲ್ಲಿನ ಭಜನ್‌ಪುರ ನಡೆದಿದೆ.
ಪೋಷಕರ ಬೈಗುಳದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶಾಲೆಯ ಅವಧಿ ಮುಗಿದ ನಂತರ ಹುಡುಗರು ನನ್ನನ್ನು ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಳು.
ಆದರೆ ಆಕೆ ಪರೀಕ್ಷೆಯಲ್ಲಿ ಸರಿಯಾಗಿ ಬರೆಯದ ಕಾರಣ ಸುಳ್ಳು ಕಥೆ ಸೃಷ್ಟಿಸಿದ್ದಳು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಈ ವೇಳೆ ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರೀಶಿಲಿಸಿದಾಗ ಆಕೆ ಒಬ್ಬಳೇ ರಸ್ತೆ ಬದಿಯಲ್ಲಿ ಕುಳಿತು, ಬ್ಲೇಡ್‌ನಿಂದ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಮಹಿಳಾ ಪೊಲೀಸರು ಆಕೆಯನ್ನು ವಿಚಾರಿಸಿದಾಗ ಸತ್ಯವನ್ನು ಬಹಿರಂಗ ಪಡಿಸಿದ್ದಾಳೆ ಎಂದು ಪೊಲೀಸ್ ಉಪ ಆಯುಕ್ತ ಜಾಯ್ ಟಿರ್ಕಿ ಮಾಹಿತಿ ನೀಡಿದ್ದಾರೆ.
ಪೋಕ್ಸೋ ಕಾಯಿದೆಯಡಿ ದಾಖಲಿಸಿಕೊಂಡಿದ್ದ ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.