ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 29 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರವೀಂದ್ರನಾಥ್ ಕೆ.ಆರ್. ಅವರಿಗೆ ಶಾಲಾ ಸಹೋದ್ಯೋಗಿಗಳು ಹಾಗೂ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಬೀಳ್ಕೋಡುಗೆ ಸಮಾರಂಭ ಶಾಲಾ ಸಭಾಂಗಣದಲ್ಲಿ ಜರಗಿತು.
ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಸಾಕ್ ಚಿಪ್ಪಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲೆ ಪದ್ಮಿನಿ ಸಭೆಯ ಅಧ್ಯಕ್ಷತೆವಹಿಸಿದ್ದರು.ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಶ್ರೀನಿವಾಸ್ ಕೆ, ಅಸೀಸ್ ಕಳಾಯಿ, ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿ, ಹೈಯರ್ ಸೆಕೆಂಡರಿ ಉಪನ್ಯಾಸಕ ವಿಶ್ವನಾಥ, ನಿವೃತ್ತ ಪ್ರಾಂಶುಪಾಲ ಥೋಮಸ್ ಮ್ಯಾಥ್ಯು, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಕಾಂತ್, ನಿವೃತ್ತ ಶಿಕ್ಷಕ ಬಾಲಕೃಷ್ಣ, ಮಾತೃ ಸಂಘದ ಅಧ್ಯಕ್ಷೆ ಸರೋಜ, ಶಿಕ್ಷಕರಾದ ಪ್ರವೀಣ್ ಕೆ, ಅಬ್ದುಲ್ ಲತೀಫ್, ವತ್ಸಲಾ, ಮನ್ಸೂರ್, ರಫೀಕ್ ಮಾಸ್ತರ್, ಸಂಜೀವ ಸಿ.ಎಚ್. ಮೊದಲಾದವರು ಮಾತನಾಡಿದರು. ಶಾಲೆಯ, ಸಹೋದ್ಯೋಗಿಗಳ ಹಾಗೂ ಎಸ್.ಎಂ.ಸಿ, ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಅಭಿನಂದಿಸಲಾಯಿತು. ರೈನಾ ಅಭಿನಂದನಾ ಪತ್ರ ವಾಚಿಸಿದರು. ಈ ಸಂದರ್ಭದಲ್ಲಿ ಪೈನಗರ್ ವಿಷನ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ರವೀಂದ್ರನಾಥ್ ಕೆ.ಆರ್.ಅವರ ಕುರಿತಾದ ಸಾಕ್ಷ್ಯಚಿತ್ರ "ಗುರು ಭೀಷ್ಮ"ದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಆಶ್ರಫ್ ಮತ್ರ್ಯ ವಂದಿಸಿದರು.