ಕಾಸರಗೋಡು: ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನಡಾವಳಿ ಮಹೋತ್ಸವ ಅಂಗವಾಗಿ ಚಂಡಿಕಾ ಹೋಮ ಗುರುವಾರ ನಡೆಯಿತು. ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯ ಅವರ ಪೌರೋಹಿತ್ಯದಲ್ಲಿ ಹೋಮ ನಡೆಯಿತು. ಈ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಚಾರ್ಯ ವಿನೋದ್‍ಜೀ ಮುಖ್ಯ ಭಾಷಣ ಮಾಡಿದರು.
ವಕೀಲ ನಾರಾಯಣ ಕೆ. ವಡಕ್ಕೇವೀಡ್ ಅಧ್ಯಕ್ಷತೆ ವಹಿಸಿದ್ದರು. 10ರಂದು ಸಂಜೆ 6ಕ್ಕೆ ಶ್ರೀ ಲಲಿತಾಸಹಸ್ರನಾಮಾವಳಿ, ರಾತ್ರಿ 8.30ಕ್ಕೆ ಭಂಡಾರ ಮನೆಯಿಂದ ಭಂಡಾರ ಆಗಮನ, 9.30ಕ್ಕೆ ಶ್ರೀದೇವರ ನೃತ್ಯಬಲಿ ಉತ್ಸವ ನಡೆಯಲಿರುವುದು.
ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ನಡಾವಳಿ ಮಹೋತ್ಸವ-ಚಂಡಿಕಾ ಹೋಮ, ಧಾರ್ಮಿಕ ಸಭೆ
0
ಮಾರ್ಚ್ 10, 2023
Tags