ಬೇಸಿಗೆಯಲ್ಲಿ ಧೂಳು ಅಧಿಕ, ಅದರಲ್ಲೂ ರೋಡ್ ಸೈಡ್ ಮನೆಯಿದ್ದರಂತೂ ಮನೆಯೊಳಗಡೆಯೆಲ್ಲಾ ಧೂಳು ತುಂಬುವುದು. ಈ ಧೂಳು ಎಲ್ಲರಿಗೂ ಆರೋಗ್ಯ ಸಮಸ್ಯೆ ತರುತ್ತದೆ, ಆದರೆ ಕೆಲವರಲ್ಲಿ ಅಧಿಕ ಸಮಸ್ಯೆ ಉಂಟು ಮಾಡುತ್ತದೆ.
ಬೇಸಿಗೆಯಲ್ಲಿ ಧೂಳು ಅಧಿಕ, ಅದರಲ್ಲೂ ರೋಡ್ ಸೈಡ್ ಮನೆಯಿದ್ದರಂತೂ ಮನೆಯೊಳಗಡೆಯೆಲ್ಲಾ ಧೂಳು ತುಂಬುವುದು. ಈ ಧೂಳು ಎಲ್ಲರಿಗೂ ಆರೋಗ್ಯ ಸಮಸ್ಯೆ ತರುತ್ತದೆ, ಆದರೆ ಕೆಲವರಲ್ಲಿ ಅಧಿಕ ಸಮಸ್ಯೆ ಉಂಟು ಮಾಡುತ್ತದೆ.
ಧೂಳಿನ ಅಲರ್ಜಿ ಲಕ್ಷಣಗಳು
* ಶೀತ
* ಸೀನು
* ಮೂಗು ಕಟ್ಟುವುದು
* ಮೂಗು ತುರಿಸುವುದು
* ಕೆಮ್ಮು
* ಮುಖದಲ್ಲಿ ನೋವು
* ತ್ವಚೆ ಊದಿಕೊಳ್ಳುವುದು
* ಚಿಕ್ಕ ಮಗುವಾದರೆ ಆಗಾಗ ಮೂಗನ್ನು ಉಜ್ಜುತ್ತಾ ಇರುತ್ತದೆ.
ಧೂಳಿನ ಅಲರ್ಜಿಯಿಂದಾಗಿ ಅಸ್ತಮಾ ಕಾಯಿಲೆ ಕೂಡ ಪ್ರಾರಂಭವಾಗುವುದು
ಅಸ್ತಮಾ ಲಕ್ಷಣಗಳು
* ಉಸಿರಾಟಕ್ಕೆ ತೊಂದರೆ
* ಎದೆ ಬಿಗಿಯಾಗುವುದು
* ಎದೆಯಲ್ಲಿಗುಂಯ್ಯಿ ಗುಂಯ್ಯಿ ಶಬ್ದ ಬರುವುದು
ಧೂಳಿನ ಅಲರ್ಜಿಗೆ ಈ ಮನೆಮದ್ದು ಮಾಡಿದರೆ ಸಮಧಾನವಾಗಬಹುದು ನೋಡಿ:
1. ಜೇನು
ಧೂಳಿನ ಅಲರ್ಜಿ ಸಮಸ್ಯೆಗೆ ಜೇನು ಅತ್ಯುತ್ತಮವಾದ ಮನೆಮದ್ದಾಗಿದೆ. ಪ್ರತಿದಿನ ಬೆಳಗ್ಗೆ ಸ್ವಲ್ಪ ಜೇನು ತೆಗೆದುಕೊಳ್ಳಿ. ಜೇನನ್ನು ಪ್ರತಿದಿನ ತೆಗೆದುಕೊಂಡರೆ ದೇಹ ಧೂಳಿಗೆ ತುಂಬಾ ಸೆನ್ಸಿಟಿವ್ ಆಗಿರುವುದು ಕಡಿಮೆಯಾಗುತ್ತದೆ.
2. ಸಿಟ್ರಸ್ ಹಣ್ಣುಗಳನ್ನು ಸೇವಿಸಿ'
ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಅಧಿಕವಿರುವುದರಿಂದ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕಿತ್ತಳೆ , ಪೈನಾಪಲ್, ದ್ರಾಕ್ಷಿ, ನಿಂಬೆ ಇವುಗಳಲ್ಲಿ ವಿಟಮಿನ್ ಸಿ ಅಧಿಕವಿದೆ. ಆದ್ದರಿಂದ ಬೇಸಿಗೆಯಲ್ಲಿ ಪ್ರತಿದಿನ ನಿಂಬೆ ಪಾನೀಯ ಕುಡಿಯಿರಿ ಅಲ್ಲದೆ ದ್ರಾಕ್ಷಿ, ಕಿತ್ತಳೆ ಈ ಬಗೆಯ ಸಿಟ್ರಸ್ ಆಹಾರ ಸೇವಿಸಿ, ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.
3. ಪುದೀನಾ ಟೀ
ಬಿಸಿ ಬ್ಲ್ಯಾಕ್ ಟೀ ಮಾಡಿ ಅದಕ್ಕೆ ಎರಡು ಪುದೀನಾ ಎಲೆ ಹಾಕಿ ಕುಡಿಯಿರಿ, ಇದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿದರೆ ಇನ್ನೂ ಒಳ್ಳೆಯದು. ಇದನ್ನು ಪ್ರತಿದಿನ ಸೇವಿಸುವುದರಿಂದ ಅಲರ್ಜಿಯಿಂದ ಉಂಟಾಗುವ ಶೀತ, ಕೆಮ್ಮು ಈ ಬಗೆಯ ಸಮಸ್ಯೆ ಧೂರಾಗುವುದು.