ಕಾಸರಗೋಡು: ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ನಡಾವಳಿ ಮಹೋತ್ಸವಕ್ಕಾಗಿ ಗೊನೆಕಡಿಯುವ ಮುಹೂರ್ತ ಶನಿವಾರ ನಡೆಯಿತು. 5ರಂದು ಬೆಳಗ್ಗೆ 9.30ಕ್ಕೆ ನಾಗತಂಬಿಲ, ರಾತ್ರಿ 10ರಿಂದ ಬ್ರಹ್ಮರಾಕ್ಷಸನಿಗೆ ವಿಶೇಷ ಪೂಜೆ ನಡೆಯುವುದು. 8ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಕೊರಕ್ಕೋಡು ಹೊನ್ನೆಮೂಲೆ ಶ್ರೀ ಮಲ್ಲಿಕಾರ್ಜುನ ದಏವಸ್ಥಾನ ವಠಾರದಿಂದ ತೆರುವತ್ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ನಂತರ ಉಗ್ರಾಣ ಮುಹೂರ್ತ ನಡೆಯುವುದು.
9ರಂದು ಬೆಳಗ್ಗೆ 8.30ಕ್ಕೆ ಚಂಡಿಕಾ ಹೋಮ ನಡೆಯುವುದು. ಮಧ್ಯಾಹ್ನ 12.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಆಚಾರ್ಯ ವಿನೋದ್‍ಜೀ ಮುಖ್ಯ ಭಾಷಣ ಮಾಡುವರು. ವಕೀಲ ನಾರಾಯಣ ಕೆ. ವಡಕ್ಕೇವೀಡ್ ಅಧ್ಯಕ್ಷತೆ ವಹಿಸುವರು. 10ರಂದು ಸಂಜೆ 6ಕ್ಕೆ ಶ್ರೀ ಲಲಿತಾಸಹಸ್ರನಾಮಾವಳಿ, ರಾತ್ರಿ 8.30ಕ್ಕೆ ಭಂಡಾರ ಮನೆಯಿಂದ ಭಂಡಾರ ಆಗಮನ, 9.30ಕ್ಕೆ ಶ್ರೀದೇವರ ನೃತ್ಯಬಲಿ ಉತ್ಸವ, 11ರಂದು ಬೆಳಗ್ಗೆ 4.30ಕ್ಕೆ ಶ್ರೀದೇವರ ಬಲಿ ಉತ್ಸವ, ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, 7ಕ್ಕೆ ಚಪ್ಪರ ಮದುವೆ, 8.30ಕ್ಕೆ ಪಿಲಿಚಾಮುಂಡಿ ದೈವದ ಕೋಲ, 10ಕ್ಕೆ ಬಬ್ಬರಿಯ ದೈವದ ಕೋಲ, 11ಕ್ಕೆ ಶ್ರೀ ದೇವರ ನೃತ್ಯ ಬಲಿ ಉತ್ಸವ, 12ಕ್ಕೆ ವಿಷ್ಣುಮೂರ್ತೀ ದೈವದ ಕೋಲ ನಡೆಯಲಿರುವುದು.
ಕಾಸರಗೋಡು ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರ-ನಡಾವಳಿ ಮಹೋತ್ಸವಕ್ಕೆ ಗೊನೆಮುಹೂರ್ತ
0
ಮಾರ್ಚ್ 04, 2023
Tags