ತಿರುವನಂತಪುರಂ: ಮುಸ್ಲಿಂ ಉತ್ತರಾಧಿಕಾರ ಕಾಯ್ದೆಯಡಿ ಹೆಣ್ಣುಮಕ್ಕಳು ಆಸ್ತಿಯನ್ನೆಲ್ಲ ಪಡೆಯದ ಹಿನ್ನೆಲೆಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದ ಶುಕೂರ್ ವಕೀಲರ ಕಾಞಂಗಾಡ್ ನಲ್ಲಿರುವ ಮನೆಗೆ ಪೆÇಲೀಸರು ಭದ್ರತೆ ಒದಗಿಸಿದ್ದಾರೆ.
ಇಸ್ಲಾಮಿಕ್ ಮೂಲಭೂತವಾದಿಗಳ ಬೆದರಿಕೆಯ ನಂತರ ಗುಪ್ತಚರ ಸುಳಿವುಗಳನ್ನು ಅನುಸರಿಸಿ ಪೆÇೀಲೀಸ್ ಕ್ರಮ ಕೈಗೊಂಡರು.
ವಿಶೇಷ ವಿವಾಹ ಕಾಯಿದೆಯಡಿ ವಿವಾಹವಾದ ಬಳಿಕ ಶುಕೂರ್ ಅವರ ಮೇಲೆ ನೇರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಸೂಚನೆಗಳಿವೆ. ಶುಕೂರ್ ಮರು ವಿವಾಹದ ವಿರುದ್ಧ ಹೇಳಿಕೆ ನೀಡಿರುವ ಕೌನ್ಸಿಲ್ ಫಾಲ್ ಫತ್ವಾ ಅಂಡ್ ರಿಸರ್ಚ್ ಎಂಬ ಸಂಸ್ಥೆಯ ವಿರುದ್ಧ ಶುಕೂರ್ ಫೇಸ್ ಬುಕ್ ನಲ್ಲಿ ಹರಿಹಾಯ್ದರು. ಯಾರಾದರೂ 'ರಕ್ಷಣೆ' ಪದವನ್ನು ತಪ್ಪಾಗಿ ಅರ್ಥಮಾಡಿಕೊಂಡರೆ ಮತ್ತು ನನ್ನ ಮೇಲೆ ಆಕ್ರಮಣ ಮಾಡಲು ಧೈರ್ಯಮಾಡಿದರೆ, ಈ ಹೇಳಿಕೆಯ ಸಂಪೂರ್ಣ ಜವಾಬ್ದಾರಿ ಈ ಹೇಳಿಕೆ ನೀಡಿದವರಿಗೆ ಮಾತ್ರ ಇರುತ್ತದೆ. ಕಾನೂನು ಜಾರಿ ಮಾಡುವವರು ಗಮನ ಹರಿಸುತ್ತಾರೆ ಎಂದು ಭಾವಿಸಿರುವುದಾಗಿ ಫೇಸ್ ಬುಕ್ ಪೋಸ್ಟ್ ನಲ್ಲಿ ಶುಕೂರ್ ಹೇಳಿದ್ದರು.
ನಟ ಹಾಗೂ ವಕೀಲರಾದ ಶುಕೂರ್ ಹಾಗೂ ಕಣ್ಣೂರು ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಮುಖ್ಯಸ್ಥೆ ಶೀನಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ 28ನೇ ವರ್ಷದಲ್ಲಿ ತಮ್ಮ ಮಕ್ಕಳೊಂದಿಗೆ ವಿಶ್ವ ಮಹಿಳಾ ದಿನಾಚರಣೆಯಂದು ಸಾಕ್ಷಿಯಾಗಿ ಎರಡನೇ ವಿವಾಹವಾದರು. ಮೊನ್ನೆ ಬೆಳಗ್ಗೆ 10.15ಕ್ಕೆ ಹೊಸದುರ್ಗ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನೆರವೇರಿತು. ಶುಕೂರ್ ಮತ್ತು ಶೀನಾ ಅವರ ಮಕ್ಕಳಾದ ಖದೀಜಾ ಜಾಸ್ಮಿನ್, ಫಾತಿಮಾ ಜೆಬಿನ್ ಮತ್ತು ಫಾತಿಮಾ ಜೆಸಾ ಪೋಷಕÀರ ಎರಡನೇ ವಿವಾಹಕ್ಕೆ ಸ್ವತಃ ಸಾಕ್ಷಿಯಾಗಿದ್ದರು.
ಅಂತರಾಷ್ಟ್ರೀಯ ಮಹಿಳಾ ದಿನದಂದು 'ಎರಡನೇ ಮದುವೆ' ಬಗ್ಗೆ ಸ್ವತಃ ಶುಕೂರ್ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದರು. ಇಬ್ಬರೂ ಹೆಣ್ಣುಮಕ್ಕಳಾಗಿದ್ದರೆ ಮುಸ್ಲಿಂ ಉತ್ತರಾಧಿಕಾರ ಕಾಯ್ದೆಯಡಿ ಸಂಪೂರ್ಣ ಆಸ್ತಿ ಹಕ್ಕು ಪಡೆಯಬೇಕು ಎಂಬ ನಿಲುವಿನ ಭಾಗವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ವಿಶೇಷ ವಿವಾಹ ಕಾಯಿದೆಯಡಿ ನಡೆಯುವ ವಿವಾಹಕ್ಕೆ ಮುಸ್ಲಿಂ ಉತ್ತರಾಧಿಕಾರ ಕಾಯ್ದೆ ಅನ್ವಯಿಸುವುದಿಲ್ಲ.
‘‘ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ನಮ್ಮ ಸಾವಿನ ನಂತರ ಹೆಣ್ಣು ಮಕ್ಕಳು ಆಸ್ತಿಯಲ್ಲಿ ಮೂರನೇ ಎರಡರಷ್ಟು ಮಾತ್ರ ಪಡೆಯುತ್ತಾರೆ. ಉಳಿದ ಒಂದು ಪಾಲು ಸಹೋದರರ ಪಾಲಾಗುತ್ತದೆ. ತಹಸೀಲ್ದಾರ್ ನೀಡುವ ಉತ್ತರಾಧಿಕಾರ ಪ್ರಮಾಣ ಪತ್ರದಲ್ಲಿ ನಮ್ಮ ಮಕ್ಕಳಲ್ಲದೆ ಒಡಹುಟ್ಟಿದವರಿಗೂ ಸ್ಥಾನ ಇರುತ್ತದೆ. ಇದಕ್ಕೆ ಒಂದೇ ಕಾರಣ ನಮಗೆ ಗಂಡು ಮಕ್ಕಳಿಲ್ಲ. “ನಮಗೆ ಒಬ್ಬ ಮಗನಾದರೂ ಇದ್ದರೆ, ಮಕ್ಕಳಿಗೆ ಸಂಪೂರ್ಣ ಆಸ್ತಿ ಸಿಗುತ್ತಿತ್ತು” ಎಂದು ಶುಕೂರ್ ಬರೆದಿದ್ದಾರೆ. ಶುಕೂರ್ ಶೀನಾ ಅವರ ಮೊದಲ ವಿವಾಹ ಅಕ್ಟೋಬರ್ 1994 ರಲ್ಲಿ ಆಗಿತ್ತು. ವಕೀಲ ಸಜೀವನ್ ಮತ್ತು ಸಿಪಿಎಂ ಮುಖಂಡ ವಿ.ವಿ.ರಮೇಶ್ ಸಾಕ್ಷಿಯಾಗಿ ಮದುವೆ ರಿಜಿಸ್ಟರ್‍ಗೆ ಸಹಿ ಹಾಕಿದರು.
ವಕೀಲ ಶುಕೂರ್ ಮನೆಗೆ ಪೊಲೀಸ್ ರಕ್ಷಣೆ; ಇಸ್ಲಾಮಿಕ್ ಮೂಲಭೂತವಾದಿಗಳ ಬೆದರಿಕೆ ಹಿನ್ನೆಲೆಯ ಗುಪ್ತಚರ ಸುಳಿವು ಅನುಸರಿಸಿ ಕ್ರಮ
0
ಮಾರ್ಚ್ 09, 2023