ಬದಿಯಡ್ಕ: ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದಲ್ಲಿ ಮೇ 19 ರಂದು ನಡೆಯಲಿರುವ ಸಾಮೂಹಿಕ ಮಹಾ ಚಂಡಿಕಾಯಾಗಕ್ಕೆ ಆಗಮಿಸಲಿರುವ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳಿಗೆ ಚಂಡಿಕಾಯಾಗ ಸಮಿತಿ ವತಿಯಿಂದ ಆಮಂತ್ರಣ ಪತ್ರಿಕೆ ಫಲ ಪುಷ್ಪ ನೀಡಿ ಅಧಿಕೃತವಾಗಿ ಆಹ್ವಾನಿಸಲಾಯಿತು.
ಅಧ್ಯಕ್ಷ ಕೆ ಎನ್ ವೇಕಟ್ರಮಣ ಹೊಳ್ಳ, ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಪ್ರದಾನ ಕಾರ್ಯದರ್ಶಿ ಪ್ರದೀಪ್ ಬೇಕಲ್, ಕೋಶಾಧಿಕಾರಿ ಕೆ ಕಮಲಾಕ್ಷ ಅಣಂಗೂರು, ಪಾಂಗೋಡು ಶ್ರೀ ಕ್ಷೇತ್ರ ಅಧ್ಯಕ್ಷÀ ವಾಮನ್ ರಾವ್ ಬೇಕಲ್, ಕನ್ನಡ ಭವನ ಸಂಚಾಲಕಿ ಸಂಧ್ಯಾರಾಣಿ ಟೀಚರ್ ಜೊತೆಗಿದ್ದು ಶ್ರೀ ಸ್ವಾಮಿಜಿಗೆ ಆಮಂತ್ರಣ ಪತ್ರಿಕೆ, ಫಲ ಪುಷ್ಪ ನೀಡಿ ಆಹ್ವಾನಿಸಿದರು. ಶ್ರೀ ಸ್ವಾಮಿಜಿಯವರು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಮಹಾ ಚಂಡಿಕಾಯಾಗ: ಎಡನೀರು ಶ್ರೀಗಳಿಗೆ ಆಹ್ವಾನ
0
ಮಾರ್ಚ್ 30, 2023