ಬೇಸಿಗೆ ಬಂತೆಂದರೆ ಮಾವಿನ ಹಣ್ಣಿನ ದರಬಾರು ಶುರುವಾಗುವುದು. ಮಾವಿನ ಹಣ್ಣಿನ ವಾಸನೆ ಮೂಗಿಗೆ ಬಡೆದರೆ ಸಾಕು ಮಾವಿನ ಹಣ್ಣು ತಿನ್ನಬೇಕೆಂದು ಅನಿಸಲಾರಂಭಿಸುತ್ತದೆ.
ಬೇಸಿಗೆ ಬಂತೆಂದರೆ ಮಾವಿನ ಹಣ್ಣಿನ ದರಬಾರು ಶುರುವಾಗುವುದು. ಮಾವಿನ ಹಣ್ಣಿನ ವಾಸನೆ ಮೂಗಿಗೆ ಬಡೆದರೆ ಸಾಕು ಮಾವಿನ ಹಣ್ಣು ತಿನ್ನಬೇಕೆಂದು ಅನಿಸಲಾರಂಭಿಸುತ್ತದೆ.
ಮಾವಿನ ಹಣ್ಣನ್ನು ರಾಸಾಯನಿಕ ಪೌಡರ್ ಹಾಕಿ ಹಣ್ಣು ಮಾಡಲಾಗಿದೆ ಎಂದಾದರೆ ತಿಳಿಯುವುದು ಹೇಗೆ ಎಂದು ನೋಡೋಣ ಬನ್ನಿ:
1. ಬಕೆಟ್ ನೀರಿನಲ್ಲಿ ಪರೀಕ್ಷೆ
ನೀವು ಒಂದು ಬಕೆಟ್ ನೀರಿನಲ್ಲಿ ತಂದ ಮಾವಿನ ಹಣ್ಣುಗಳನ್ನು ಹಾಕಿ. ಆ ಮಾವಿನ ಹಣ್ಣುಗಳು ನೀರಿನಲ್ಲಿ ಮುಳುಗಿದರೆ ರಾಸಾಯನಿಕ ಮುಕ್ತ ಹಣ್ಣು ಎಂದು ಹೇಳಬಹುದು. ಅದೇ ಮಾವಿನ ಹಣ್ಣು ಬಕೆಟ್ ನೀರಿನಲ್ಲಿ ತೇಲುತ್ತಿದ್ದರೆ ಪೌಡರ್ ಹಾಕಿ ತಯಾರಿಸಿದ ಹಣ್ಣಾಗಿದೆ.
2. ಅದರ ತೊಟ್ಟ ನೋಡಿ
ಪೌಡರ್ ಹಾಕಿ ಹಣ್ಣು ಮಾಡಲಾದ ಮಾವಿನ ಹಣ್ಣಿನ ತೊಟ್ಟು ನೋಡಿದರೆ ಆ ಭಾಗ ಹಣ್ಣಾಗಿರುವುದಿಲ್ಲ. ಅಲ್ಲದೆ ಅದರ ಮೇಲೆ ಹಸಿರು, ಹಳದಿ ಬಣ್ಣದಲ್ಲಿದ್ದರೂ, ಹಸಿರು ಹಸಿರು ಬಣ್ಣ ಪ್ಯಾಚ್ ರೀತಿ ಕಂಡು ಬರುವುದು. ಅದೇ ಸ್ವಾಭಾವಿಕವಾಗಿ ಹಣ್ಣಾದ ಮಾವಿನಹಣ್ಣಿನ ಮೇಲ್ಭಾಗದ ಹಳದಿ-ಹಸಿರು ಬಣ್ಣ ಪ್ಯಾಚ್-ಪ್ಯಾಚ್‌ನಂತೆ ಇರದೆ ಒಂದೇ ರೀತಿ ಇರುತ್ತದೆ.
3. ರಸ ಇರುವುದಿಲ್ಲ
ರಾಸಾಯನಿಕ ಪೌಡರ್ ಹಾಕಿ ಹಣ್ಣಾಗಿದ ಮಾವಿನ ಹಣ್ಣಿನಲ್ಲಿ ರಸ ಇರುವುದಿಲ್ಲ, ರಸ ತುಂಬಾ ಕಡಿಮೆ ಇರಲಿದೆ.
4. ರುಚಿಯೂ ಇರುವುದಿಲ್ಲ
ಮಾವಿನ ಕಾಯಿಗೆ ಪುಡಿ ಹಾಕಿ ಹಣ್ಣು ಮಾಡಿದ್ದರೆ ಅಂತ ಮಾವಿನ ಹಣ್ಣು ನೋಡಲು ಮಾತ್ರ ಆಕರ್ಷಕವಾಗಿರುತ್ತದೆ. ಆದರೆ ನೈಸರ್ಗಿಕವಾಗಿ ಹಣ್ಣಾದಾಗ ನೀಡುವ ರುಚಿ ಇರುವುದಿಲ್ಲ.
ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣು ತಿನ್ನಬಾರದು ಏಕೆ?
* ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಮಕ್ಕಳಿಗೆ ನೀಡುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
* ಇಂಥ ಹಣ್ಣುಗಳು ಹೊಟ್ಟೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.
* ಕ್ಯಾನ್ಸರ್‌ನಂಥ ಮಹಾಮಾರಿ ಕಾಯಿಲೆಗೆ ಇಂಥ ರಾಸಾಯನಿಕವಿರುವ ಆಹಾರಗಳು ಕಾರಣವಾಗಿರಬಹುದು.
* ಅಧ್ಯಯನಗಳ ಪ್ರಕಾರ ಮಾವಿನ ಹಣ್ಣು ಹಣ್ಣಾಗಿಸಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕ ನರಗಳ ಮೇಲೂ ಕೂಡ ಕೆಟ್ಟ ಪರಿಣಾಮ ಬೀರುವುದು. ಇದರಿಂದಾಗಿ ತಲೆನೋವು, ಸುಸ್ತು, ತುಂಬಾ ನಿದ್ದೆ ಬರುವುದು, ನೆನಪಿನ ಶಕ್ತಿ ಕಡಿಮೆಯಾಗುವುದು, ಸುಸ್ತು, ನರಗಳಲ್ಲಿ ಸಮಸ್ಯೆ ಮುಂತಾದ ತೊಂದರೆ ಉಂಟಾಗುವುದು.