ಮಂಜೇಶ್ವರ: ಕ್ರೀಡೆಯಿಂದ ಶಾರೀರಿಕ ಹಾಗೂ ಮಾನಸಿಕ ಜಾಗೃತಿ ಸಾಧ್ಯ. ಕ್ರೀಡೆ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ಯುವ ಸಮುದಾಯ ಕ್ರೀಡೆಯ ಮೂಲಕ ಸಂಘಟನಾ ತತ್ವ ಪಾಲಿಸಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು.
ಯುವ ಕೇಸರಿ ಮೀಯಪದವು ಹಮ್ಮಿಕೊಂಡ ದಿ.ಜ್ಯೋತಿಶ್ ಸ್ಮಾರಕ ಪ್ರೊ. ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಧಾರ್ಮಿಕ ಮುಂದಾಳು, ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಶುಭ ಹಾರೈಸಿದರು.
ಟಿ ಜಿ ರಾಜಾರಾಮ್ ಭಟ್, ರಾಧಾಕೃಷ್ಣ ಅಡ್ಯಂತಾಯ, ಕೆ.ವಿ. ಭಟ್, ವಿಘ್ನೇಷ್ ಮೀಯಪದವು, ಸುಬ್ಬಣ್ಣ ಆಳ್ವ, ಶಂಕರ ನಾರಾಯಣ್ ಉಪಸ್ಥಿತರಿದ್ದರು.