ಕಾಸರಗೋಡು: ಲ್ಲಾ ಪಂಚಾಯತಿ ತನ್ನ ವಾರ್ಷಿಕ ಯೋಜನೆಯ 2022-23 ರ ಅಡಿಯಲ್ಲಿ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರ ಮಹಿಳಾ ಪೋಷಕರಿಗೆ ವೃತ್ತಿಪರ ತರಬೇತಿ ಕಾರ್ಯಕ್ರಮವನ್ನು ಪುಲ್ಲೂರಿನ ಪೆರಿಯ ಮಹಾತ್ಮ ಮಾದರಿ ಬಡ್ಸ್ ಶಾಲೆಯಲ್ಲಿ ಪ್ರಾರಂಭಿಸಿದೆ. ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ ಉದ್ಘಾಟಿಸಿದರು. ಜಿಲ್ಲೆಯ ಎಲ್ಲ 11 ಎಂಡೋಸಲ್ಫಾನ್ ಬಾಧಿತ ಪಂಚಾಯಿತಿಗಳ ಆಸಕ್ತ ಮಹಿಳೆಯರನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಲಾಗಿದೆ. 100 ಮಂದಿಗೆ ವಿವಿಧ ವೃತ್ತಿಗಳಲ್ಲಿ ತರಬೇತಿ ನೀಡುವ ಉದ್ದೇಶವಿದೆ. ಪುಲ್ಲೂರು ಪೆರಿಯ ಮತ್ತು ಅಜಾನೂರು ಪಂಚಾಯಿತಿ ವ್ಯಾಪ್ತಿಯ 30 ಮಂದಿ ಫಲಾನುಭವಿಗಳು ಮೊದಲ ತಂಡದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕೇರಳ ಸರ್ಕಾರದ ಅಡಿಯಲ್ಲಿ ಎ.ಎಸ್.ಎ.ಪಿ ಮೂಲಕ ತರಬೇತಿ ನೀಡಲಾಗುತ್ತದೆ. ಈ ಬ್ಯಾಚ್ ಹ್ಯಾಂಡ್ ಎಂಬ್ರಾಯ್ಡರಿ ಮತ್ತು ಟೈಲರಿಂಗ್ ನಲ್ಲಿ ತರಬೇತಿ ಪಡೆಯಲಿದೆ. ತರಬೇತಿಯನ್ನು ಪೂರ್ಣಗೊಳಿಸಿದವರು ಅನುಮೋದಿತ ಪ್ರಮಾಣಪತ್ರವನ್ನು ಸಹ ಪಡೆಯುತ್ತಾರೆ.
ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್ ಅಧ್ಯಕ್ಷತೆ ವಹಿಸಿದ್ದರು. ಎಎಸ್ ಎಪಿ ಕಾರ್ಯಕ್ರಮ ನಿರ್ವಾಹಕ ಜಿಸ್ ಜಾರ್ಜ್ ಹಾಗೂ ಬಡ್ಸ್ ಶಾಲೆಯ ಪ್ರಾಂಶುಪಾಲೆ ಪಿ.ದೀಪಾ ಮಾತನಾಡಿದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಶೀಬಾ ಮುಮ್ತಾಜ್ ಸ್ವಾಗತಿಸಿ, ಕೆ.ನೀತಾ ವಂದಿಸಿದರು.
ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತ ಮಹಿಳಾ ಪೋಷಕರಿಗೆ ವೃತ್ತಿ ತರಬೇತಿ ಆರಂಭ
0
ಮಾರ್ಚ್ 21, 2023