ಕಾಸರಗೋಡು: ಲೈಫ್ ವಸತಿ ಯೋಜನೆಯಲ್ಲಿ ಈ ವರ್ಷದ ಜಿಲ್ಲಾ ಮಟ್ಟದ ಕೀಲಿಕೈ ವಿತರಣಾ ಸಮಾರಂಭವನ್ನು ಮಡಿಕೈ ತಲಕಾನzಲ್ಲಿÀ ಉಪ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಉದ್ಘಾಟಿಸಿ.
ತಲಕಾನದ ಪುμÁ್ಪ-ಕುಂಞ ರಾಮನ್ ದಂಪತಿಗೆ ಮನೆಯ ಕೀಲಿಕೈ ಹಸ್ತಾಂತರಿಸುವ ಮೂಲಕ ಸಬ್ ಕಲೆಕ್ಟರ್ ಉದ್ಘಾಟಿಸಿದರು.ಮಡಿಕೈ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಸ್.ಪ್ರೀತಾ ಅಧ್ಯಕ್ಷತೆ ವಹಿಸಿದ್ದರು.ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಮುಖ್ಯ ಅತಿಥಿಯಾಗಿದ್ದರು. ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ನಾರಾಯಣನ್, ಓ.ಕುಂಞÂ್ಞ ಕಣ್ಣನ್, ಕೆ.ನಾರಾಯಣನ್, ವೇಲಾಯುಧನ್, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಯೋಜನಾ ನಿರ್ದೇಶಕ ಕೆ.ಪ್ರದೀಪನ್, ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಪ್ರಭಾಕರನ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಪಿ.ಸತ್ಯ, ರಾಮ ಪದ್ಮನಾಭನ್ ಪಂಚಾಯತ್ ಕಾರ್ಯದರ್ಶಿ ದಿನೇಶನ್ ಪರಾಯಿಲ್ ಓ.ಕುಂಞ ಕೃಷ್ಣನ್, ಎನ್.ಬಾಲಕೃಷ್ಣನ್. ಪ್ರಸನ್ನನ್ ಚುಳ್ಳಿ ಮೂಲ, ದಿನೇಶನ್ ಕೆ ಮಾತನಾಡಿದರು. ವಿಇಒ ಸರಿತಾ ವರದಿ ಮಂಡಿಸಿದರು. ಮಡಿಕೈ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿ.ಪ್ರಕಾಶನ ಸ್ವಾಗತಿಸಿ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ರಾಜನ್ ವಂದಿಸಿದರು.
ಈ ವರ್ಷ ರಾಜ್ಯದಲ್ಲಿ ಎರಡನೇ ಹಾಗೂ ಜಿಲ್ಲೆಯಲ್ಲಿ ಪ್ರಥಮ ಮನೆಯನ್ನು ಹಸ್ತಾಂತರಿಸಲಾಗಿದೆ.ಇನ್ನೂ 39 ಮನೆಗಳನ್ನು ಶೀಘ್ರದಲ್ಲಿ ಹಸ್ತಾಂತರಿಸಲಾಗುವುದು ಎಂದು ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಿಳಿಸಿದರು.