ಕಾಸರಗೋಡು: ಛಾಯಾಗ್ರಹಣ ಕ್ಷೇತ್ರಕ್ಕೆ ಅನಧಿಕೃತ ಸೇರ್ಪಡೆ ಕೊನೆಗೊಳಿಸಬೇಕು, ಛಾಯಾಚಿತ್ರ ಉತ್ಪನ್ನಗಳ ಮೇಲಿನ ಹೆಚ್ಚಿಸಲಾದ ಜಿಎಸ್‍ಟಿ ತೆರವುಗೊಳಿಸಬೇಕು, ಸರ್ಕಾರದಿಂದ ಅನುಮೋದಿತ ಗುರುತಿನ ಚೀಟಿ ವಿತರಿಸಬೇಕು, ಛಾಯಾಗ್ರಹಣ ಕ್ಷೇತ್ರದಲ್ಲಿ ಆರ್ಥಿಕ ಪ್ಯಾಕೇಜ್ ಅಳವಡಿಸಬೇಕು, ಕಲ್ಯಾಣ ಸವಲತ್ತು ಹೆಚ್ಚಿಸಬೇಕು ಮುಂತಾದ ಭೇಡಿಕೆ ಮುಂದಿರಿಸಿ ಏ. 4ರಂದು ತಿರುವನಂತಪುರದಲ್ಲಿ ಸೆಕ್ರೆಟೇರಿಯೆಟ್ ಮುತ್ತಿಗೆ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.
ಛಾಯಾಗ್ರಾಹಕರ ಸಂಘದ ರಾಜ್ಯ ಸಮಿತಿ (ಎಕೆಪಿಎ) ಹಾಗೂ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಕಾಸರಗೋಡು ಶಾಸಕ ಜಿಲ್ಲಾಧ್ಯಕ್ಷ ಕೆ.ಸಿ.ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ.ನೆಲ್ಲಿಕುನ್ ಧರಣಿ ಉದ್ಗಾಟಿಸಿದರು.
ಎಕೆಪಿಎ ರಾಜ್ಯ ಮಹಿಳಾ ವಿಭಾಗದ ಸಂಯೋಜಕ ಹರೀಶ್ ಪಾಲಕುನ್ನು, ರಾಜ್ಯ ಸಮಿತಿ ಸದಸ್ಯ ಎನ್.ಎ ಭರತನ್, ಜಿಲ್ಲಾ ಸಮಿತಿ ಕೋಶಾಧಿಕಾರಿ ವೇಣು ವಿ.ವಿ, ಜಿಲ್ಲಾ ಉಪಾಧ್ಯಕ್ಷ ಶರೀಫ್ ಫ್ರೇಮ್ ಆರ್ಟ್, ಗೋವಿಂದನ್ ಚಂಕರಕ್ಕೋಡ್, ಪ್ರಶಾಂತ್ ತೈಕಡಪ್ಪುರ, ಅಶೋಕನ್ ಪೆÇಯಿನಾಚಿ, ದಿನೇಶ್ ಇನ್‍ಸೈಟ್, ವಾಸು ಎ, ಸುರೇಶ್ ಆಚಾರ್ಯ, ಸಂತೋಷ್ ಫೆÇೀಟೋ ಮ್ಯಾಕ್ಸ್, ಉದೇಶ್ ಚೆರುವತ್ತೂರು, ಸುಕು ಸ್ಮಾರ್ಟ್ ಉಪಸ್ಥಿತರಿದ್ದರು.
ಛಾಯಾಗ್ರಹಣ ಕ್ಷೇತ್ರದ ಸಂರಕ್ಷಣೆಗೆ ಆಗ್ರಹಿಸಿ ಛಾಯಾಗ್ರಾಹಕರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ
0
ಮಾರ್ಚ್ 24, 2023