ಎರ್ನಾಕುಳಂ: ಬ್ರಹ್ಮಪುರಂ ಮಾಲಿನ್ಯ ಘಟಕದಲ್ಲಿ ಉಂಟಾಗಿರುವ ಅಗ್ನಿ ಅವಘಡದ ವಿಚಾರದಲ್ಲಿ ಮೇಜರ್ ರವಿ ಸಾಂಸ್ಕೃತಿಕ ನಾಯಕರನ್ನು ಕಟುವಾಗಿ ಟೀಕಿಸಿದ್ದಾರೆ.
ಪರಮಾಣು ಬಾಂಬ್‍ಗಿಂತಲೂ ಮಾರಣಾಂತಿಕ ಪರಿಸ್ಥಿತಿ ಇದೆ ಎಂದು ಅವರು ಹೇಳಿರುವರು. ಜನತೆ ಉಸಿರುಗಟ್ಟಿ ಸಂಕಷ್ಟ ಅನುಭವಿಸುತ್ತಿದ್ದು, ಮುಂದಿನ ಪೀಳಿಗೆಯನ್ನು ನಾಶ ಮಾಡುವ ಪರಿಸ್ಥಿತಿಗೆ ಬದಲಾಗುತ್ತಿದೆ ಎಂದು ಟೀಕಿಸಿದರು.
ಅನಗತ್ಯ, ಗಂಭೀರಗಳಳಲ್ಲದ ವಿಷಯಗಳಲ್ಲಿ ಮೂಗುತೂರಿಸುವ ಸಾಂಸ್ಕೃತಿಕ ನಾಯಕರು ಈಗ ಯಾಕೆ ಬಾಯಿ ತೆರೆಯುತ್ತಿಲ್ಲ? ಎಂದು ಮೇಜರ್ ರವಿ ಪ್ರಶ್ನಿಸಿದರು. ರಾಷ್ಟ್ರದ ಉತ್ತರದ ಕಡೆಗೆ ಬೊಟ್ಟುಮಾಡಿ ಬೊಬ್ಬಿರಿಯುತ್ತಿದ್ದವರು ಯಾರೂ ಈಗ ಮೌನವಾಗಿ |ಏಕಿದ್ದಾರೆ. ಚಿತ್ರರಂಗದ ಕೆಲವರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು, ಆದರೆ ಈಗ ಯಾರೂ ಬಾಯಿ ಬಿಡುತ್ತಿಲ್ಲ ಎಂದು ಮೇಜರ್ ರವಿ ಹೇಳಿದರು.
ನಟ ಮತ್ತು ಚಿತ್ರಕಥೆಗಾರ ರಂಜಿತ್ ಪಣಿಕ್ಕರ್ ಒಬ್ಬರಷ್ಟೇ ಪ್ರತಿಭಟನೆಗೆ ಮುಂದಾದರು. ಬ್ರಹ್ಮಪುರಂ ಟೈಂ ಬಾಂಬ್ ಎಂದು ರಾಜ್ಯ ಸರಕಾರ ಬಹಿರಂಗವಾಗಿ ಒಪ್ಪಿಕೊಳ್ಳಬೇಕು ಎಂದು ಮೇಜರ್ ರವಿ ಒತ್ತಾಯಿಸಿದರು. ಈ ಹಿಂದೆಯೂ ಇಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡಿತ್ತು. ಆದರೆ ಅದು ಯಾರಿಗೂ ತಿಳಿದಿರಲಿಲ್ಲ ಎಂದು ಬೊಟ್ಟುಮಾಡಿದರು. ರಂಜಿತ್ ಪಣಿಕ್ಕರ್ ಮಾತನಾಡಿ, ಈ ಭಾಗದಲ್ಲಿ ಸಂಸ್ಕರಣೆಯಾಗದೆ ಇμÉ್ಟೂಂದು ಕಸ ಸಂಗ್ರಹವಾಗಿರುವುದು ಗಂಭೀರ ಅಪರಾಧ ಎಂದಿದ್ದರು.
ಸಾಂಸ್ಕøತಿಕ ನಾಯಕರ ಬಾಯಿಗಳಿಗೇನಾಗಿದೆ?: ಬೊಗಳುವ ವರ್ಗ ಉತ್ತರದ ಕಡೆಯಿಂದ ಇತ್ತ ಮುಖ ಮಾಡುತ್ತಿಲ್ಲ ಯಾಕೆ?: ತೀವ್ರ ಟೀ|ಕೆ ವ್ಯಕ್ತಪಡಿಸಿದ ಮೇಜರ್ ರವಿ
0
ಮಾರ್ಚ್ 12, 2023
Tags