ಕಾಸರಗೋಡು : ಕೇರಳ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾಸರಗೋಡು ವತಿಯಿಂದ ರಾತ್ರಿ ನಡಿಗೆಯನ್ನು ಆಯೋಜಿಸಿತ್ತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ ರ್ಯಾಲಿಗೆ ಚಾಲನೆ ನೀಡಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಧಿಕಾರಿ ವಿ.ಎಸ್.ಶಿಮ್ನಾ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡಿವೈಎಸ್ಪಿ ಪಿ.ಕೆ. ಸುದಾಕರನ್, ಸಾಮಾಜಿಕ ನ್ಯಾಯ ಇಲಾಖೆ ಜಿಲ್ಲಾ ಅಧಿಕಾರಿ ಶೀಬಾ ಮುಮ್ತಾಜ್, ಕಾಸರಗೋಡು ವನಿತಾ ಸೆಲ್ ಸಿ.ಐ ಚಂದ್ರಿಕಾ, ಕಾಸರಗೋಡು ಐಸಿಡಿಎಸ್ ಸಿಡಿಪಿಒ ಜಯಶ್ರೀ, ಹೆಚ್ಚುವರಿ ಐಸಿಡಿಎಸ್ ಸಿಡಿಪಿಒ ಜೂಡಿ ಉಪಸ್ಥಿತರಿದ್ದರು. ಕಾಸರಗೋಡು ಹೆಚ್ಚುವರಿ ಐಸಿಡಿಎಸ್ ಕ್ಲರ್ಕ್ ಎ.ಟಿ.ಶಶಿ ಸ್ವಾಗತಿಸಿದರು. ಹಿರಿಯ ಅಧೀಕ್ಷಕ ವಿ.ಕೆ.ಅಮರನಾಥ ಭಾಸ್ಕರ್ ವಂದಿಸಿದರು. ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಮಹಿಳೆಯರು ರಾತ್ರಿ ನಡಿಗೆಯಲ್ಲಿ ಪಾಲ್ಗೊಂಡರು.,
ಮಹಿಳಾ ದಿನಾಚರಣೆ: ಮಹಿಳೆಯರಿಂದ ರಾತ್ರಿ ನಡಿಗೆ ಕಾರ್ಯಕ್ರಮ
0
ಮಾರ್ಚ್ 08, 2023