ಬೊಜ್ಜು ಮೈ ಆಯುರ್ವೇದವು ನಮ್ಮ ದೇಹದ ಪ್ರಕೃತಿ ಕಾರಣ ಎಂದು ಹೇಳಲಾಗುತ್ತದೆ, ಅತ್ಯಧಿಕ ಮೈ ತೂಕ ಹೊಂದಿರುವವರು ಮೈ ತೂಕ ಕಡಿಮೆ ಮಾಡಲು ಆಯುರ್ವೇದದಲ್ಲಿ ಏನು ಪರಿಹಾರವಿದೆ ಎಂದು ನೋಡೋಣ ಬನ್ನಿ:
ಆಯುರ್ವೇದದ ಪ್ರಕಾರ ಈ ಮೂರು ದೋಷಗಳು ಮನುಷ್ಯನಲ್ಲಿರುತ್ತದೆ
* ವಾರ
* ಪಿತ್ತ
* ಕಫ
ಈ ಮೂರು ದೋಷಗಳು ಪ್ರತಿಯೊಬ್ಬರಲ್ಲೂ ಇದ್ದರೂ ಇದರಲ್ಲಿ ಕೆಲವೊಂದು ಅಧಿಕವಿರುತ್ತದೆ,
ಆದ್ದರಿಂದ ನಮ್ಮ ಶರೀರಕ್ಕೆ ತಕ್ಕಂತೆ ಆಹಾರಕ್ರಮ ರೂಢಿಸಿಕೊಂಡರೆ ಆರೋಗ್ಯಕ್ಕೆ
ಒಳ್ಳೆಯದು.
ನಿಮ್ಮ ವಾತ ದೇಹವಾದರೆ ಆಯುರ್ವೇದ ಪ್ರಕಾರ ಆಹಾರಕ್ರಮ ಹೀಗಿರಬೇಕು
* ದಿನದಲ್ಲಿ 3-4 ಬಾರಿ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸೇವಿಸಿ.
* ಹಸಿ ಆಹಾರಗಳಿಗಿಂತ ಬೇಯಿಸಿದ ಆಹಾರ ಒಳ್ಳೆಯದು
* ಬದನೆ, ಟೊಮೆಟೊ, ಕಾಳು ಮೆಣಸು ಇವುಗಳು ಒಳ್ಳೆಯದಲ್ಲ
* ಸಿಟ್ರಸ್ ಆಹಾರ ತಿನ್ನಬೇಡಿ
* ಧಾನ್ಯಗಳನ್ನು ಮಿತಿಯಲ್ಲಿ ಸೇವಿಸಿ
* ಸಕ್ಕರೆ, ಮದ್ಯ, ಹೊಗೆಸೊಪ್ಪು ಇವುಗಳಿಂದ ದೂರವಿರಿ
* ಹಸಿ, ಫ್ರೋಝನ್ ಹಾಗೂ ತುಂಬಾ ತಣ್ಣನೆಯ ಆಹಾರಗಳಿಂದ ದೂರವಿರಿ.
ಪಿತ್ತ ದೋಷವಿದ್ದರೆ
* ಹಸಿ ತರಕಾರಿ ಹೆಚ್ಚಾಗಿ ಬಳಸಿ, ಸಲಾಡ್ ಮಾಡಿ ಸೇವಿಸಿ
* ಮಾಂಸಾಹಾರ ಮಿತಿಯಲ್ಲಿ ಸೇವಿಸಿ
* ಖಾರದ ಆಹಾರ, ಕಾಫಿ, ಮದ್ಯ ಇವುಗಳಿಂದ ದೂರವಿರಿ
* ನಟ್ಸ್, ಬೀಜಗಳು ಪಿತ್ತ ದೋಷ ಇರುವವರಿಗೆ ಒಳ್ಳೆಯದಲ್ಲ
* ಧಾನ್ಯಗಳು, ಕಾಳುಗಳನ್ನು ಮಿತಿಯಲ್ಲಿ ಸೇವಿಸಿ
* ಹಾಲಿನ ಪದಾರ್ಥಗಳನ್ನು ಬಳಸಿ.
ಕಫ ದೋಷವಿದ್ದರೆ
* ಆಹಾರವನ್ನು ಮಿತಿಯಲ್ಲಿ ಸೇವಿಸಿ
* ಹಾಲಿನ ಉತ್ಪನ್ನಗಳು ಹಾಗೂ ಅತ್ಯಧಿಕ ಕೊಬ್ಬಿನಂಶದ ಆಹಾರಗಳಿಂದ ದೂರವಿರಿ
* ಪ್ರೊಟೀನ್ ಆಹಾರ ಕಡಿಮೆ ಸೇವಿಸಿ
* ಸೊಪ್ಪು ಹಾಗೂ ಬೇರಿನ ತರಕಾರಿಗಳನ್ನು (ಬೀಟ್‌ರೂಟ್, ಕ್ಯಾರೆಟ್...) ಹೆಚ್ಚಾಗಿ ಬಳಸಿ
* ಮಾಂಸಾಹಾರ ಮಿತಿಯಲ್ಲಿ ಸೇವಿಸಿ.
ಆಯುರ್ವೇದದಲ್ಲಿ ತೂಕ ಇಳಿಕೆಗೆ ಪರಿಹಾರ
ತ್ರಿಫಲ: ತ್ರಿಫಲ ತೂಕ ಇಳಿಕೆಗೆ ಸಹಕಾರಿ ಎಂಬುವುದು ಅಧ್ಯಯನದಿಂದ ಸಾಬೀತಾಗಿದೆ. ಇದು ರಕ್ತದಲ್ಲಿ ಸಕ್ಕರೆಯಂಶ ಕಡಿಮೆ ಮಾಡುವುದರಿಂದ ಮಧುಮೇಹಿಗಳಿಗೆ ಒಳ್ಳೆಯದು.
ಕಲೋಂಜಿ: ಕರಿ ಜೀರಿಗೆ ಇದು ಕೂಡ ತೂಕ ಇಳಿಕೆಗೆ ಸಹಕಾರಿ.
ವಿಜಯಸರ: ಇದು ಕೂಡ ತೂಕ ಇಳಿಕೆಗೆ ಸಹಕಾರಿಯಾಗಿದೆ.
ತೂಕ ಇಳಿಕೆಗೆ ಇತರ ಪರಿಹಾರ
*ಪುನರ್‌ನವ
* ಲೋಳೆಸರ
* ಅಜ್ವೈನ್'
* ಬಿಸಿ ನೀರಿಗೆ ಜೇನು ಮತ್ತು ನಿಂಬೆ ಹಾಕಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು
* ಹುರುಳಿಕಾಳು
ತೂಕ ಇಳಿಕೆಗೆ ಆಯುರ್ವೇದ ಸಪ್ಲಿಮೆಂಟ್
ಆಯುರ್ವೇದ ಅಂತಲ್ಲ ಯಾವುದೇ ಸಪ್ಲಿಮೆಂಟ್ ತೆಗೆಯುವ ಮುನ್ನ ನೀವು ವೈದ್ಯರ ಬಳಿ ಸಲಹೆ ಪಡೆದ ಬಳಿಕವಷ್ಟೇ ತೆಗೆದುಕೊಳ್ಳಿ. ಈ ಸಪ್ಲಿಮೆಂಟ್‌ಗಳು ತೂಕ ಕಡಿಮೆ ಮಾಡಿದರೂ ಅಡ್ಡಪರಿಣಾಮಗಳು ಅಧಿಕ. ಆದ್ದರಿಂದ ಜಾಗ್ರತೆ.
ಈ ಸರಳ ಟಿಪ್ಸ್ ಪಾಲಿಸಿದರೆ ತೂಕ ನಿಯಂತ್ರಣದಲ್ಲಿಡಬಹುದು
* ಆಹಾರವನ್ನು ಮಿತಿಯಲ್ಲಿ ಸೇವಿಸಿ
* ರಾತ್ರಿ ಸ್ವಲ್ಪವೇ ಸ್ವಲ್ಪ ಆಹಾರ ಸೇವಿಸಿ
* ದಿನಾ ಬೆಳಗ್ಗೆ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ
* ಪ್ರತಿನಿತ್ಯ ವ್ಯಾಯಾಮ ಮಾಡಿ
* ಸರಿಯಾಗಿ ನಿದ್ದೆ ಮಾಡಿ. ಅತೀ ಕಡಿಮೆ ಅಥವಾ ಅತೀ ಹೆಚ್ಚು ನಿದ್ದೆ ಒಳ್ಳೆಯದಲ್ಲ.