ಕಾಸರಗೋಡು: ಯುವ ಪೀಳಿಗೆಯ ಶಕ್ತಿಯನ್ನು ರಾಷ್ಟ್ರ ನಿರ್ಮಾಣ ಚಟುವಟಿಕೆಗಳು ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಬಳಸಿಕೊಳ್ಳಲು ಪೂರ್ವಭಾವಿಯಾಗಿ ಕೆಲಸ ಮಾಡುವ ರಾಜ್ಯ ಯುವ ಕಲ್ಯಾಣಮಂಡಳಿಯ ಕಾರ್ಯವೈಖರಿ ಶ್ಲಾಘನೀಯ ಎಂದು ಬಂದರು, ಪ್ರಾಚ್ಯವಸ್ತು ಸಂಗ್ರಹಾಲಯ ಖಾತೆ ಸಚಿವ ಅಹಮದ್ ದೇವರಕೋವಿಲ್ ತಿಳಿಸಿದ್ದಾರೆ.
ಅವರು ಯುವ ಕಲ್ಯಾಣ ಮಂಡಳಿ ವತಿಯಿಂದ ಚೆರುವತ್ತೂರು ಕಾವುಂಚಿರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ-ಮತ್ತು ಪುರುಷ ಕಬಡ್ಡಿ ಫೆಸ್ಟ್‍ನ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಪ್ರಜೆಗಳಾಗುವುದು ಯುವಜನರ ಮುಖ್ಯ ಕಾಳಜಿ, ಕರ್ತವ್ಯವಗಬೇಕು. ಇದು ಉತ್ತಮ ಶಿಕ್ಷಣ, ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ಪ್ರಜ್ಞೆಯನ್ನು ಒಳಗೊಂಡಿರುತ್ತದೆ. ಯುವಜನ ಕಲ್ಯಾಣ ಮಂಡಳಿಯ ಚಟುವಟಿಕೆಗಳು ಯುವಕರ ಕ್ರಿಯಾಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ ಎಂದು ಸಚಿವರು ಹೇಳಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಯುವ ಕಲ್ಯಾಣ ಮಂಡಳಿ ಸದಸ್ಯ ಶರೀಫ್ ಪಾಳೋಳಿ, ಬಿಆರ್ ಡಿ ವ್ಯವಸ್ಥಾಪಕ ನಿರ್ದೇಶಕ ಪಿ.ಶಿಜಿನ್, ಟಿ.ಕೆ.ಸಿ. ಕಾವುಞÂ ಹಾಜಿ ಹಾಗೂ ಜಿಲ್ಲಾ ಯುವ ಕಾರ್ಯಕ್ರಮ ಅಧಿಕಾರಿ ಶಿಲಾಸ್ ಉಪಸ್ಥಿತರಿದ್ದರು. ಯುವ ಕಲ್ಯಾಣ ಪರಿಷತ್ ಸದಸ್ಯ ದೀಪು ಪ್ರೇಮನಾಥ್ ಸ್ವಾಗತಿಸಿದರು. ಜಿಲ್ಲಾ ಯುವ ಸಮನ್ವಯಾಧಿಕಾರಿ ಎ.ವಿ.ಶಿವಪ್ರಸಾದ್ ವಂದಿಸಿದರು.
ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಯುವ ಕಲ್ಯಾಣ ಮಂಡಳಿಯ ಕ್ರಮ ಶ್ಲಾಘನೀಯ-ಸಚಿವ ಅಹಮ್ಮದ್ ದೇವರಕೋವಿಲ್
0
ಮಾರ್ಚ್ 20, 2023
Tags