ಕಾಸರಗೋಡು: ಕಡಪ್ಪುರ ಶ್ರೀ ಕುರುಂಬಾ ಭಗವತಿ ದೇವಸ್ಥಾನದ ಭರಣಿ ಮಹೋತ್ಸವಕ್ಕೆ ಧ್ವಜಾರೋಹಣ ನಡೆಯಿತು. ದೇವಸ್ಥಾನದ ಪದಾಧಿಕಾರಿಗಳು, ಆಡಳಿತ ಸಮಿತಿಯ ಸದಸ್ಯರು ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು. ಧ್ವಜಾರೋಹಣ ಅಂಗವಾಗಿ ಆಚಾರನೈಮಿತ್ತಿಕವಾಗಿ ತುಪಾಕಿ ಮೊಳಗಿಸಲಾಯಿತು.
ಭರಣಿ ಮಹೋತ್ಸವ ಅಂಗವಾಗಿ ಮಾ. 25ರ ವರೆಗೆ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ. ಉತ್ಸವದ ಅಂಗವಾಗಿ ಪ್ರತಿದಿನ ಬೆಳಗ್ಗೆ 7, ಮಧ್ಯಾಹ್ನ 12, ಸಂಜೆ 6 ಮತ್ತು 8 ಗಂಟೆಗೆ ಪೂಜೆ ನಡೆಯುವುದು. ಬುಧವಾರ ಕೊಚ್ಚಿನ್ ಸಿಲ್ವರ್ ಸ್ಟಾರ್ ಅವರಿಂದ ಹಾಸ್ಯ ಮೆಗಾ ಶೋ ನಡೆಯಿತು.
24ರಂದು ದೃಶ್ಯಕಾವ್ಯ ಪ್ರದರ್ಶನ ನಡೆಯಲಿದೆಏಳುನಲ್ಲಾಟ್ ನಲ್ಲಿ ಶಾಸ್ತ್ರೋಕ್ತವಾಗಿ ಗುದ್ದಲಿಪೂಜೆ, 25ರಂದು ಮಧ್ಯಾಹ್ನ 3ಕ್ಕೆ ಮಹೋತ್ಸವ ಭರಣಕುಳಿ, ವ್ರತ ಅರ್ಪಣೆ, ಪೂಜೆ, ಕೋಲ್ಕಳ, ಧ್ವಜಾರೋಹಣ, ಇದೇ 21ರಿಂದ 25ರವರೆಗೆ ಬೆಳಗ್ಗೆ 8ರಿಂದ 10ರವರೆಗೆ ನಡೆಯಲಿದೆ. ಕುರುಂಬ ಆರಾಧ್ಯ ಸಂಗಮದ ನೇತೃತ್ವದಲ್ಲಿ ಸಹಸ್ರನಾಮ ಪಾರಾಯಣ ನಡೆಯಲಿದೆ.
ಕಡಪ್ಪುರ ಶ್ರೀ ಕುರುಂಬಾ ಭಗವತಿ ದೇವಸ್ಥಾನದ ಭರಣಿ ಮಹೋತ್ಸವಕ್ಕೆ ಧ್ವಜಾರೋಹಣ
0
ಮಾರ್ಚ್ 23, 2023