ಕಾಸರಗೋಡು: ನಾಪತ್ತೆಯಾಗಿದ್ದ ಬದಿಯಡ್ಕ ಮಾನ್ಯದ ಖಾಸಗಿ ಶಾಲಾ ಶಿಕ್ಷಕ, ಮಟ್ಟನ್ನೂರ್ ವೆಳಿಯಾಪರಂಬ್ ನಿವಾಸಿ ಟಿ.ವಿ.ಪ್ರದೀಪ್ ಕುಮಾರ್(51)ಅವರ ಮೃತದೇಹ ಕಾಸರಗೋಡಿನ ಖಾಸಗಿ ಆಸ್ಪತ್ರೆ ಸನಿಹದ ಬಾವಿಯಲ್ಲಿ ಜೀರ್ಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸೋಮವಾರ ಬಾವಿ ಆವರಣದಲ್ಲಿ ದುರ್ಗಂಧ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ಮೃತದೇಹ ಕಂಡುಬಂದಿತ್ತು. ಮಾ.22ರಂದು ಇವರು ನಾಪತ್ತೆಯಾಗಿದ್ದು, ಇವರ ಪತ್ನಿ ಶಿಕ್ಷಕಿ ರಮ್ಯಾ ಕರಿವೆಳ್ಳೂರ್ ಪೊಲೀಸರಿಗೆ ದೂರು ನೀಡಿದ್ದರು. ಶಿಕ್ಷಕ ಸಂಘಟನೆ ಕೆಪಿಎಸ್‍ಟಿಎ ಮುಖಂಡರೂ ಆಗಿದ್ದ ಪ್ರದೀಪ್ ಮಾನ್ಯದಲ್ಲಿ ವಾಸಿಸುತ್ತಿದ್ದರು. ಪೊಲೀಸ್, ಅಗ್ನಿಶಾಮಕ ದಳ ಸಇಬ್ಬಂದಿ ಮೃತದೇಹ ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.
ನಾಪತ್ತೆಯಾಗಿದ್ದ ಶಿಕ್ಷಕನ ಮೃತದೇಹ ಬಾವಿಯಲ್ಲಿ ಪತ್ತೆ
0
ಮಾರ್ಚ್ 27, 2023
Tags