ಮುಳ್ಳೇರಿಯ: ಧರ್ಮಮಾರ್ಗದಲ್ಲಿ ನಡೆಯುವವನ ಜೊತೆ ಈಶ್ವರನಿರುತ್ತಾನೆ. ಭಜನೆ ಸತ್ಸಂಗ ನಾಮ ಜಪಗಳನ್ನು ಮಾತೆಯರು ಮಕ್ಕಳಿಗೆ ತಲುಪಿಸಿದಲ್ಲಿ ಸನಾತನ ಧರ್ಮದ ವಿಶ್ವಾಸವನ್ನು ಮಕ್ಕಳಿಗೆ ತಲುಪಿಸಲು ಸಾಧ್ಯ ಎಂದು ವಲವಡಲ ಶ್ರೀಮಹಾದೇವ ಮಹಾ ವಿಷ್ಣು ಸಾನಿಧ್ಯದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮಾತೃ ಸಭೆಯಲ್ಲಿ ಕೇರಳ ಮಹಿಳಾ ಐಕ್ಯವೇದಿ ಅಧ್ಯಕ್ಷೆ ನಿಶಾ ಟೀಚರ್ ಅಭಿಪ್ರಾಯಪಟ್ಟರು.
ಬ್ರಹ್ಮಕಲಶೋತ್ಸವದಂತಹ ಸಾರ್ವಜನಿಕ ಉತ್ಸವಗಳಲ್ಲಿ ಮಹಿಳೆಯರು ಬೆನ್ನುಲುಬಾಗಿ ನಿಂತರೆ ಯಾವ ಕಾರ್ಯವು ಅಸಾಧ್ಯವಲ್ಲ.ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಪ್ರಶಂಸಿದ ಸುತ್ತಾ ಶ್ರೀಮತಿ ವಸಂತಿ ಟೀಚರ್ ಸ್ಥಳೀಯ ಲಕ್ಷ್ಮಿ ಪಾರ್ವತಿ ಮಾತೃ ಮಂಡಳಿಯ ಸದಸ್ಯೆಯ ಕಾರ್ಯಗಳನ್ನು ಶ್ಲಾಘಿಸಿದರು.
ಲಕ್ಷ್ಮಿ ಪಾರ್ವತಿ ಮಾತೃ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಟೀಚರ್ ಗೌರಿಯಡ್ಕ ಮಾತೃಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಶೈಲಜಾ ಭಟ್,ಕಾರಡ್ಕ ಬ್ಲಾಕ್ ಪಂಚಾಯತ್ ಸದಸ್ಯೆಶ್ರೀಮತಿ ನಳಿನಿ ಕೃಷ್ಣ ,ಶ್ರೀಮತಿ ಲತಾ ಮಧುಸೂದನ್ ಸುಳ್ಯ, ಶ್ರೀಮತಿ ವಿಜಯ ಜಯರಾಮ್ ಭಟ್ ಮಂಗಳೂರು, ಕಾರಡ್ಕ ಪಂಚಾಯತ್ ಸದಸ್ಯೆ ಶ್ರೀಮತಿ ರೂಪಾಸತ್ಯ,ಶ್ರೀಮತಿ ಪುಷ್ಪ ಸುರೇಶ್, ಕುಟುಂಬಶ್ರೀ ಸಿ.ಡಿ.ಎಸ್. ಅನುಪ್ರಿಯಾ ನೆಲ್ಯಡ್ಕ ಉಪಸ್ಥಿತಿಯಲ್ಲಿ ಮಾತೃ ಸಭೆ ಜರಗಿತು.
ಕಾರ್ಯಕ್ರಮಕ್ಕೆ ಸಿಂಧೂರ ಪಿವಿ ಪ್ರಾರ್ಥನೆ ಹಾಡಿದರು.ಶುಭ ಕಾರ್ತಿಕ್ ಸ್ವಾಗತ ಹೇಳಿದರೆ, ಶ್ರೀಮತಿ ಬಿಂದು ಧನ್ಯವಾದ ಸಮರ್ಪಿಸಿದರು.ಶ್ರೀಮತಿ ವಿದ್ಯಾ ವಿ ಕೆದಿಲಾಯ ಕಾರ್ಯಕ್ರಮ ನಿರೂಪಿಸಿದರು.
ವೈದಿಕ ಮತ್ತು ತಾಂತ್ರಿಕ ಕಾರ್ಯಕ್ರಮದ ಅಂಗವಾಗಿ ಗಣಪತಿ ಹವನ, ತ್ರಿಕಾಲ , ಸಂಹಾರ, ತತ್ವಕಲಶ ಪೂಜೆ, ಶೈಯಾಪೂಜೆ, ಅಧಿವಾಸ ಹೋಮದ ಅಗ್ನಿಜನನ, ತತ್ವ ಕಲಶಾಭಿಷೇಕ, ಜೀವ ಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ ಶಯ್ಯೋನಯನ, ಅಂಕುರ ಪೂಜೆ, ಮಹಾಪೂಜೆ ಜರಗಿತು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಸ್ವಾಮಿ ಸೂರ್ಯಪಾದ ಬೆಂಗಳೂರು ಮತ್ತು ಬಳಗದವರಿಂದ ಸತ್ಸಂಗ,ಕುಮಾರಿ ಪ್ರಜ್ಞ ಕೋಳಿಕ್ಕಜೆ ಸಂಧ್ಯಾ ಮತ್ತು ವಿಷ್ಣುಪ್ರಿಯ.ಶಶಿ ಸಿ. ಕಾರಡ್ಕ ಶಿಷ್ಯ ವೃಂದದವರಿಂದ. ಭರತನಾಟ್ಯ ಶಿವಶಕ್ತಿ ಕುಟುಂಬಶ್ರೀ ತೆಕ್ಕೆಕೆÀರೆ ಇವರಿಂದ ಕೈಕೊಟ್ಟುಕ್ಕಳಿ ಮತ್ತು ಮೂಕಾಂಬಿಕಾ ಮಹಿಳಾ ವೃಂದ ನೆಲ್ಲಡ್ಕದಿಂದ ತಿರುವಾದಿರ ನೃತ್ಯ, ಸ್ಮೃತಿಲಯ ಸಿಂಗರ್ಸ್ ಪೈಕ ಇವರಿಂದ ಭಕ್ತಿಗಾನ ಸುಧಾ ಜರಗಿತು.