ಅಗರ್ತಲಾ: ತ್ರಿಪುರಾ ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್ ಅವರು ವಿಧಾನಸಭೆ ಅದಿವೇಶನದ ವೇಳೆಯೇ ನೀಲಿ ಚಿತ್ರ ವೀಕ್ಷಣೆ ಮಾಡಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಬಾಗ್‌ಬಾಸ ಕ್ಷೇತ್ರದ ಶಾಸಕರಾಗಿರುವ ಜಬಾದ್ ಅವರು, ರಾಜ್ಯ ಬಜೆಟ್ ಅಧಿವೇಶನದ ಸಂದರ್ಭ ತಮ್ಮ ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿರುವುದು ವಿಡಿಯೊಗಳಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.
ಜನಪ್ರತಿನಿಧಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಈ ರೀತಿ ಸಿಕ್ಕಿಬೀಳುತ್ತಿರುವುದು ಇದೇ ಮೊದಲಲ್ಲ.
2012ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಇಬ್ಬರು ಸಚಿವರು ರಾಜ್ಯ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗಲೇ ನೀಲಿ ಚಿತ್ರ ವೀಕ್ಷಣೆ ಮಾಡಿದ್ದರು.
ಬಿಹಾರದ ಪಟ್ನಾ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಟಿವಿ ಪರದೆಗಳಲ್ಲಿ ಜಾಹೀರಾತು ಬಿತ್ತರಗೊಳ್ಳುವ ಬದಲು ಸುಮಾರು ಮೂರು ನಿಮಿಷ ನೀಲಿ ಚಿತ್ರ ಪ್ರಸಾರವಾಗಿದ್ದು, ಇತ್ತೀಚೆಗೆ ಸುದ್ದಿಯಾಗಿತ್ತು.