ಕಾಸರಗೋಡು : ಮುಹಿಮ್ಮತ್ ಸಂಸ್ಥಾಪಕ, ಪ್ರಮುಖ ಆತ್ಮೀಯ ಪಂಡಿತ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರ 17 ನೇ ಉರುಸ್ ಮುಬಾರಕ್ ಹಾಗೂ ಮುಹಿಮ್ಮತ್ ಪದವಿ ಪ್ರದಾನ ಸಮಾರಂಭ ಗುರುವಾರ ಪುತ್ತಿಗೆ ಮುಹಿಮ್ಮತ್‍ನಲ್ಲಿ ಆರಂಭಗೊಂಡಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಅಹ್ದಲ್ ಮಖಾಂ ಪ್ರಾರ್ಥನಾ ಕಾರ್ಯಕ್ರಮಕ್ಕೆ ಸೈಯದ್ ಮದನಿ ತಙಳ್ ನೇತೃತ್ವ ವಹಿಸಿದ್ದರು. ಸೈಯದ್ ಅತಾವುಲ್ಲಾ ತಙಳ್ ಉದ್ಯಾವರ ಉರುಸ್ ಉದ್ಘಾಟಿಸಿದರು. ಕೇರಳ ಮುಸ್ಲಿಂ ಜಮಾತ್ ಜಿಲ್ಲಾ ಕಾರ್ಯದರ್ಶಿ ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಅಧ್ಯಕ್ಷತೆ ವಹಿಸಿದ್ದರು.
ಮಾರ್ಚ್ 4ರಂದು ಬೆಳಗ್ಗೆ 9.39ಕ್ಕೆ ತಮಿಳು ಸಮ್ಮೇಳನ ನಡೆಯುವುದು. ಮನ್ಸೂರ್ ಹಾಜಿ ಚೆನೈ ಅಧ್ಯಕ್ಷತೆ ವಹಿಸುವರು. ತಮಿಳುನಾಡು ಮುಸ್ಲಿಂ ಜಮಾಅತ್ ಅಧ್ಯಕ್ಷ ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಕಯ್ಯಲ್ ಪಟ್ಟನಂ ಉದ್ಘಾಟಿಸುವರು.
ಮಾರ್ಚ್ 5ರಂದು ಬೆಳಗ್ಗೆ 9ಕ್ಕೆ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಮುಹಮ್ಮದ್ ಸಖಾಫಿ ಪರವೂರ್ ಉದ್ಘಾಟಿಸುವರು. ಮಧ್ಯಾಹ್ನ 2ಗಂಟೆಗೆ ಪೂರ್ವ ವಿದ್ಯಾರ್ಥಿ ಸಂಗಮ ನಡೆಯುವುದು. ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳರ ಅಧ್ಯಕ್ಷತೆಯಲ್ಲಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ ಉದ್ಘಾಟಿಸುವರು. ಸಂಜೆ 5 ಕ್ಕೆ ನಡೆಯುವ ಪದವಿ ಪ್ರದಾನ ಸಮಾರಂಭವನ್ನು ಸಯ್ಯದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಲ್ ಉದ್ಘಾಟಿಸುವರು. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಅಧ್ಯಕ್ಷತೆ ವಹಿಸುವರು. ಸಮಾರೋಪ ಪ್ರಾರ್ಥನೆಗೆ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮುತ್ತನ್ನೂರ್ ನೇತೃತ್ವ ನೀಡುವರು.
ಇಂದಿನಿಂದ ಪುತ್ತಿಗೆ ಮುಹಿಮತ್ ಉರುಸ್‍ಗೆ ಚಾಲನೆ
0
ಮಾರ್ಚ್ 04, 2023