ಕಾಸರಗೋಡು: ರಾಜ್ಯ ಹಿರಿಯ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ, ಹಿಂದಿ ಏಕಾಕ್ಷ ಮಂಚ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಹಿಂದಿ ಶಿಕ್ಷಕರ ಮಂಚ್ ನ ಹಂಗಾಮಿ ರಾಜ್ಯ ಕಾರ್ಯದರ್ಶಿ ಕೆ. ಶಿನ್ಯಾ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ. ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಹರೀಶ್ ಐ(ಕುಂಬಳೆ), ಗೀತಾ ಎಂ, ಗೀತಾಬಾಯಿ.ಕೆ, ಲೀಲಾವತಿ. ಬಿ. (ಕಾಸರಗೋಡು), ಸುರೇಶ್ ಕುಮಾರ್ ಎ.ಕೆ. (ಚಿತ್ತಾರಿಕಲ್), ಪದ್ಮಿನಿ. ಎ (ಚೆರುವತ್ತೂರು)ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಹಿಂದಿ ಏಕಾಕ್ಷ ಮಂಚ್‍ನ ರಾಜ್ಯ ಕಲೆ ಮತ್ತು ಸಂಸ್ಕøತಿ ಸಮಿತಿ ಸಂಚಾಲಕ ಪ್ರಶಾಂತ್ ರೈ, ಜಿಲ್ಲಾ ಕಾರ್ಯದರ್ಶಿ ಪಿ. ಕೆ. ಬಾಲಚಂದ್ರನ್, ಕೋಶಾಧಿಕಾರಿ ಕೆ. ಸುರೇಶ್, ಅಕಾಡೆಮಿಕ್ ಕೌನ್ಸಿಲ್ ಅಧ್ಯಕ್ಷ ಜಿ.ಕೆ.ಗಿರೀಶ್, ಐಟಿ ಸೆಲ್ ಸಂಚಾಲಕ ಟೈಟಸ್ ವಿ.ಥಾಮಸ್, ಜಿಲ್ಲಾ ಕಲಾ ಸಾಂಸ್ಕೃತಿಕ ಸಮಿತಿ ಸಂಚಾಲಕ ಆನಂದಕೃಷ್ಣನ್ ಎಡಚೇರಿ, ಮಾಜಿ ಕೋಶಾಧಿಕಾರಿ ಟಿ.ವಿ.ಶ್ರೀನಿವಾಸನ್ ಉಪಸ್ಥಿತರಿದ್ದರು.
ಹಿಂದಿ ಶಿಕ್ಷಕರ ಸಂಘ, ಹಿಂದಿ ಏಕಾಕ್ಷ ಮಂಚ್ ವತಿಯಿಂದ ಬೀಳ್ಕೊಡುಗೆ
0
ಮಾರ್ಚ್ 20, 2023