ಬದಿಯಡ್ಕ: ವಳಕುಂಜದ ಮಂಜು- ಶ್ರೀಜ ಇವರ ಚಿಕಿತ್ಸೆಗಾಗಿ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜೂರುಗೊಳಿಸಿದ 60ಸಾವಿರ ರೂ. ಮೊತ್ತವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ತಾಲೂಕು ಯೋಜನಾಧಿಕಾರಿ ಶ್ರಿ ಮುಕೇಶ್, ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಅಖಿಲೇಶ್ ನಗುಮುಗಂ, ಗ್ರಾಮಾಭಿವೃದ್ಧಿ ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರಕರಾದ ದಿನೇಶ್ ಕೊಕ್ಕಡ ,ಕುಂಬ್ಡಾಜೆ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಗೋಸಾಡ, ಪೆರ್ಲ ವಲಯ ಮೇಲ್ವಿಚಾರಕ ಶಿವಪ್ರಸಾದ್ , ಶ್ರೀಜಾ ಮಂಜು ಚಿಕಿತ್ಸಾ ಸಹಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಪಳ್ಳತ್ತಡ್ಕ, ಕೋಶಾಧಿಕಾರಿ ಹಮೀದ್ ಪಳ್ಳತ್ತಡ್ಕ , ರಾಮ ಪಳ್ಳತ್ತಡ್ಕ, ಜನಾರ್ದನ, ಮೀಡಿಯಾ ಕ್ಲಾಸಿಕಲ್ಸ್ ಕೋಶಾಧಿಕಾರಿ ನವೀನ್ ಮುಂತಾದವರು ಉಪಸ್ಥಿತರಿದ್ದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಚಿಕಿತ್ಸಾ ಸಹಾಯ ವಿತರಣೆ
0
ಮಾರ್ಚ್ 02, 2023
Tags