ಸನ್‌ಸ್ಕ್ರೀನ್ ಬಳಸಲೇಬೇಕಾ?ಬಿಸಿಲಿಗೆ ಹೋದಾಗ ಮಾತ್ರ ಬಳಸಿದರೆ ಸಾಕಲ್ಲ, ಮನೆಯಲ್ಲಿರುವಾಗ ಇದರ ಅಗ್ಯತವಿದೆಯೇ? ಈ ರೀತಿಯ ಹಲವಾರು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.
ಸನ್‌ಸ್ಕ್ರೀನ್ ಕುರಿತ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ:
ಸನ್‌ಸ್ಕ್ರೀನ್ ಪ್ರತಿದಿನ ಬಳಸಬೇಕಾ?
ಬಿಸಿಲಿನಲ್ಲಿ ಓಡಾಡುವಾಗ ಪ್ರತಿದಿನ ಸನ್‌ಸ್ಕ್ರೀನ್ ಬಳಸುವುದು ಅವಶ್ಯಕವಾಗಿದೆ. ಏಕೆಂದರೆ ಸನ್‌ಸ್ಕ್ರೀನ್ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆಯನ್ನು ನೀಡುತ್ತದೆ.
ಸನ್‌ಸ್ಕ್ರೀನ್ ಮುಖಕ್ಕೆ ಮಾತ್ರ ಹಚ್ಚಿದರೆ ಸಾಲದು'
ನಾವು ಸನ್‌ಸ್ಕ್ರೀನ್ ಅನ್ನು ಮುಖಕ್ಕೆ ಮಾತ್ರ ಹಚ್ಚುತ್ತೇವೆ. ಆದರೆ ಬಿಸಿಲಿನಲ್ಲಿ ಓಡಾಡುವಾಗ ಕುತ್ತಿಗೆ ಭಾಗ, ಕೈಗಳಿಗೆ, ಪಾದಗಳಿಗೆ ಸನ್‌ಸ್ಕ್ರೀನ್ ಲೋಷನ್ ಹಚ್ಚಬೇಕು. ಇನ್ನು ತುಂಬಾ ಮೈ ಕಾಣುವ ಬಟ್ಟೆ ಧರಿಸಿದರೆ ಸೂರ್ಯ ಬಿಸಿಲು ನೇರವಾಗಿ ತ್ವಚೆಯ ಮೇಲೆ ಬೀಳುವ ಕಡೆ ಹಚ್ಚಬೇಕು.
ಸನ್‌ಸ್ಕ್ರೀನ್ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳೇನು?
* ಸನ್‌ಸ್ಕ್ರೀನ್‌ನ SPF 30+ ಇರಬೇಕು
* ವಾಟರ್ ರೆಸಿಸ್ಟೆನ್ಸ್ ಆಗಿರಬೇಕು, ಅಂದರೆ ಬೆವರಿದಾಗ ಕೂಡ ತ್ವಚೆಯಲ್ಲಿಯೇ ಇದ್ದು ಬಿಸಿಲಿನಿಂದ ರಕ್ಷಣೆ ನೀಡಬೇಕು.
ಸನ್‌ಸ್ಕ್ರೀನ್ ಬಳಸುವುದರಿಂದ ದೊರೆಯುವ ಪ್ರಯೋಜನಗಳೇನು?
* ಮುಖದ ಮೇಲೆ ನೆರಿಗೆ ಬೀಳುವುದು ಕಡಿಮೆಯಾಗುತ್ತದೆ
* ಮುಖದಲ್ಲಿ ಕಪ್ಪು ಕಲೆಯಿದ್ದರೆ ಕಡಿಮೆಯಾಗುವುದು
* ಸನ್‌ಟ್ಯಾನ್ ಆಗುವುದು ತಡೆಗಟ್ಟುತ್ತದೆ
* ಬಹುಮುಖ್ಯವಾಗಿ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುತ್ತದೆ.
ಸನ್‌ಸ್ಕ್ರೀನ್ ಲೋಷನ್ ಬಳಸುವುದರಿಂದ ವಿಟಮಿನ್ ಡಿ ಕೊರತೆ ಉಂಟಾಗುವುದೇ?
ಸನ್‌ಸ್ಕ್ರೋನ್ ಲೋಷನ್ ಬಳಸುವುದರಿಂದ ವಿಟಮಿನ್ ಡಿ ಕೊರತೆ ಉಂಟಾಗಬಹುದು ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ.
ವಿಟಮಿನ್ ಡಿಯನ್ನು ನೀವು ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಸೂರ್ಯನ ಬೆಳಕಿನಲ್ಲಿ
ನಿಲ್ಲುವ ಪಡೆಯಬಹುದು. ಈ ಸಮಯದಲ್ಲಿ ಸೂರ್ಯನ ಕಿರಣಗಳು ಅಷ್ಟೊಂದು ಪ್ರಖರತೆ
ಹೊಂದಿರುವುದಿಲ್ಲ. ಮಧ್ಯಾಹ್ನ ಹೊತ್ತಿನಲ್ಲಿ ಸೂರ್ಯನ ಕಿರಣಗಳು ಮೈ ಮೇಲೆ ನೇರವಾಗಿ
ಬಿದ್ದಾಗ ನೇರಳಾತೀತ ಕಿರಣಗಳು ತ್ವಚೆಗೆ ತಾಗುವ ಅಪಾಯ ಹೆಚ್ಚು.
ಯಾವ ಹೊತ್ತಿನಲ್ಲಿ ಬಿಸಿಲಿನಲ್ಲಿ ನಿಲ್ಲಬಾರದು?
ಬೆಳಗ್ಗೆ ಹತ್ತು ಗಂಟೆ 2 ಗಂಟೆಯವರೆಗೆ ಸೂರ್ಯನ ಶಾಖ ತುಂಬಾ ಇರುವುದರಿಂದ ಈ ಸಮಯದಲ್ಲಿ ಹೊರಗಡೆ ಹೋಗುವಾಗ ಸನ್‌ಸ್ಕ್ರೀನ್ ಲೋಷನ್ ಕಡ್ಡಾಯವಾಗಿ ಬಳಸಿ.
ಮನೆಯ ಒಳಗಡೆಯೂ ಸನ್‌ಸ್ಕ್ರೀನ್ ಬಳಸಬೇಕೆ?
ಮನೆಯಲ್ಲಿ ಇರುವಾಗಲೂ ಸನ್‌ಸ್ಕ್ರೀನ್ ಲೋಷನ್ ಬಳಸುವುದು ಒಳ್ಳೆಯದು, ಇದು ತ್ವಚೆಗೆ ತಕ್ಷಣೆ ನೀಡುತ್ತದೆ.
ಕೆಲವರು ಬೇಸಿಗೆಯಲ್ಲಿ ಮಾತ್ರ ಸನ್‌ಸ್ಕ್ರೀನ್ ಲೋಷನ್ ಬಳಸುತ್ತಾರೆ. ಆದರೆ ಸನ್‌ಸ್ಕ್ರೀನ್ ಎಲ್ಲಾ ಕಾಲದಲ್ಲೂ ಬಳಸಿ.
ಸನ್‌ಸ್ಕ್ರೀನ್ ಅನ್ನು ದಿನದಲ್ಲಿ ಎಷ್ಟು ಬಾರಿ ಬಳಸಬೇಕು?
ಸಾಮಾನ್ಯವಾಗಿ ಎರಡು ಗಂಟೆಗೊಮ್ಮೆ ಸನ್‌ಸ್ಕ್ರೀನ್ ಬಳಸಬೇಕು. ಅದರಲ್ಲೂ ಸ್ನಾನವಾದ ಬಳಿಕ, ಸ್ವಿಮ್ಮಿಂಗ್ ಬಳಿಕ ಸನ್‌ಸ್ಕ್ರೀನ್ ಬಲಸಬೇಕು. ಮನೆಯೊಳಗಡೆಯೇ ಇರುವುದಾದರೆ ದಿನದಲ್ಲಿ ಎರಡು ಬಾರಿ ಹಚ್ಚಿದರೆ ಸಾಕು.
ಸನ್‌ಸ್ಕ್ರೀನ್ ಲೋಷನ್ ಪ್ರತಿ ಎರಡು ಗಂಟೆಗೊಮ್ಮೆ ಹಚ್ಚುವುದು ಕಷ್ಟವಾಗಬಹುದು. ಏಕೆಂದರೆ ಪ್ರತಿಬಾರಿ ಮುಖ ತೊಳೆದು ಮೇಕಪ್ ಮಾಡಬೇಕು. ಬದಲಿಗೆ ಸನ್‌ಸ್ಕ್ರೀನ್ ಸ್ಪ್ರೇ ಬಳಸಿದರೆ ಒಳ್ಳೆಯದು.