ತ್ರಿಶೂರ್: ಕೇಂದ್ರ ಗೃಹ ಸಚಿವ ಅಮಿತ್ ಶಾ ತ್ರಿಶೂರ್ ಗೆ ನಿನ್ನೆ ಭೇಟಿ ನೀಡಿದರು. ಆಗಮಿಸಿದ ಅವರನ್ನು ಸ್ವಾಗತಿಸಿದ ಬಳಿಕ ಮೊದಲು ಶಕ್ತನ್ ಸ್ಮೃತಿ ಮಂಟಪದಲ್ಲಿ ಪುμÁ್ಪರ್ಚನೆ ಮಾಡಿದರು.
ವಡಕ್ಕುನಾಥ ದೇವಾಲಯದ ಮೈದಾನದಲ್ಲಿ ಕೇರಳದ ಪರವಾಗಿ ಶಾ ಅವರನ್ನು ಸ್ವಾಗತಿಸಲಾಯಿತು. ಪೆರುವನಂ ಕುಟ್ಟನ್ ಮಾರಾರ್, ಗಾಯಕ ಅನೂಪ್ ಶಂಕರ್ ಮತ್ತು ಸಂಗೀತ ನಿರ್ದೇಶಕ ವಿದ್ಯಾದರನ್ ಮಾಸ್ಟರ್ ಶಕ್ತನ್ ಸ್ಮಾರಕಕ್ಕೆ ಸ್ವಾಗತಿಸಿದರು.
ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ರಾಜ್ಯ ಪ್ರಭಾÀರಿ ಪ್ರಕಾಶ್ ಜಾವಡೇಕರ್, ಬಿಡಿಜೆಎಸ್ ಅಧ್ಯಕ್ಷ ತುμÁರ್ ವೆಲ್ಲಾಪಳ್ಳಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಕುಟ್ಟಿ, ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್, ಸಿಕೆ ಪದ್ಮನಾಭನ್ ಮತ್ತು ಪಿಕೆ ಕೃಷ್ಣದಾಸ್ ಜನಶಕ್ತಿ ರ್ಯಾಲಿಯಲ್ಲಿ ಮಾತನಾಡಿದರು. ಮಾಜಿ ಡಿಜಿಪಿ ಜೇಕಬ್ ಥಾಮಸ್, ಸುರೇಶ್ ಗೋಪಿ, ಇ. ಶ್ರೀಧರನ್, ಚಿತ್ರನಟ ದೇವನ್ ಮತ್ತು ಸಿ.ಕೆ.ಜಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಜಕೀಯ ಚಾಣಕ್ಯ ಕೇರಳದಲ್ಲಿ: ಕೇರಳ ಸಂದರ್ಶಿಸಿದ ಅಮಿತ್ ಶಾ
0
ಮಾರ್ಚ್ 12, 2023
Tags