ತಿರುವನಂತಪುರಂ: ಇಂದಿನಿಂದ ರಾಜ್ಯದಲ್ಲಿ ಆರೋಗ್ಯ ಕಾರ್ಡ್ ಕಡ್ಡಾಯವಾಗಲಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಆಹಾರ ಸಂಸ್ಥೆಗಳ/ ಹೋಟೆಲ್ ಗಳ ಕೋರಿಕೆಯ ಮೇರೆಗೆ ಆರೋಗ್ಯ ಕಾರ್ಡ್ ಹಲವಾರು ಬಾರಿ ವಿಳಂಬವಾಯಿತು. ಇಂದಿನಿಂದ ಕಟ್ಟುನಿಟ್ಟಿನ ತಪಾಸಣೆ ಮುಂದುವರಿಯಲಿದೆ. ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು ಮುಂತಾದ ಎಲ್ಲಾ ಆಹಾರ ಸಂಸ್ಥೆಗಳು ನೌಕರರಿಗೆ ಆರೋಗ್ಯ ಕಾರ್ಡ್ ಅನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.
ರಾಜ್ಯ ಆಹಾರ ಸುರಕ್ಷತಾ ಇಲಾಖೆಯು ಸಾರ್ವಜನಿಕರಿಗೆ ಆಹಾರ ಸುರಕ್ಷತೆ ದೂರುಗಳನ್ನು ನೇರವಾಗಿ ವರದಿ ಮಾಡಲು ಕುಂದುಕೊರತೆ ಪೋರ್ಟಲ್ ಅನ್ನು ಸ್ಥಾಪಿಸಿದೆ. ದೂರಿನ ಮೇಲೆ ಕೈಗೊಂಡ ಕ್ರಮಗಳನ್ನೂ ಈ ಮೂಲಕ ತಿಳಿಯಬಹುದು. ದೂರಿಗೆ ಸಂಬಂಧಿಸಿದ ಪೋಟೋ ಮತ್ತು ವೀಡಿಯೋ ಅಪ್‍ಲೋಡ್ ಮಾಡಲು ಸಹ ಸಾಧ್ಯವಿದೆ. ಈ ಪೋರ್ಟಲ್ ಮೂಲಕ ಇದುವರೆಗೆ 108 ದೂರುಗಳನ್ನು ಸ್ವೀಕರಿಸಲಾಗಿದೆ. 30 ದೂರುಗಳಿಗೆ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ಬಂದಿರುವ ಉಳಿದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಆಹಾರ ಸುರಕ್ಷತೆ ತಪಾಸಣೆ ಜೋರಾಗಿ ನಡೆಯುತ್ತಿದೆ. ವಿಶೇಷ ದಳ ಗುರುವಾರವೊಂದರಲ್ಲೇ 205 ಕೇಂದ್ರಗಳಲ್ಲಿ ತಪಾಸಣೆ ನಡೆಸಿದೆ. 21 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಎಚ್ಚರ: ಇಂದಿನಿಂದ ಆರೋಗ್ಯ ಕಾರ್ಡ್ ಕಡ್ಡಾಯ
0
ಮಾರ್ಚ್ 31, 2023