ಕಾಸರಗೋಡು: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ವಕೀಲರ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮಹಿಳಾ ದಿನವನ್ನು ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಆಚರಿಸಲಾಯಿತು. ನಿವೃತ್ತ ಮುನ್ಸಿಫ್ ಮ್ಯಾಜಿಸ್ಟ್ರೇಟ್ ಅನ್ನಮ್ಮ ಜಾನ್ ಸಮಾರಂಭ ಉದ್ಘಾಟಿಸಿದರು.
ಭಾರತೀಯ ವಕೀಲರ ಪರಿಷತ್ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ವಕೀಲೆ ಕೆ.ಎಂ ಬೀನಾ ಅಧ್ಯಕ್ಷತೆ ವಹಿಸಿದ್ದರು. ವಕೀಲ ಎಸ್.ಸಜಿತ್ ಕುಮಾರ್ ಪಯ್ಯನ್ನೂರು ಮುಖ್ಯ ಭಾಷಣ ಮಾಡಿದರು. ಭಾರತೀಯ ವಕೀಲರ ಪರಿಷತ್ ರಾಜ್ಯ ಸಮಿತಿ ಉಪಾಧ್ಯಕ್ಷ ವಕೀಲ ಬಿ.ರವೀಂದ್ರನ್, ಜಿಲ್ಲಾಧ್ಯಕ್ಷ ಎ. ಸಿ ಅಶೋಕ್ ಕುಮಾರ್, ರಾಜ್ಯ ಸಮಿತಿ ಸದಸ್ಯ ಕರುಣಾಕರನ್ ನಂಬ್ಯಾರ್, ಸಲಹೆಗಾರ ಸಿ.ಅಶೋಕ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಪಿ. ಮುರಳೀಧರನ್, ಕಾಸರಗೋಡು ವಿಭಾಗದ ಅಧ್ಯಕ್ಷ ಎಸ್. ಕೆ. ಪ್ರಜಿತ್ ಉಪಸ್ಥಿತರಿದ್ದರು. ಕಾಸರಗೋಡು ಘಟಕದ ಕಾರ್ಯಕಾರಿ ಸಮಿತಿ ಸದಸ್ಯೆ ವಕೀಲೆ ಎಸ್. ಎಂ. ಗಾಯತ್ರಿ ಸ್ವಾಗತಿಸಿದರು. ವಕೀಲೆ ಕೆ. ಜಾಹ್ನವಿ ನಾಯಕ್ ವಂದಿಸಿದರು.