ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯಣi ಪೆರ್ಲ ಕುಟುಂಬ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಕ್ಷಯರೋಗ ನಿಯಂತ್ರಣಾ ಘಟಕ ಕಾಸರಗೋಡು ಹಾಗೂ ಪೆರ್ಲ ನಲಂದಾ ಕಾಲೇಜಿನ ಎನ್ನೆಸ್ಸಸ್ ಘಟಕದ ಸಹಯೋಗದೊಂದಿಗೆ ಜನಜಾಗೃತಿಯ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಶ್ವ ಕ್ಷಯರೋಗ ನಿಯಂತ್ರಣಾ ದಿನಾಚರಣೆಯನ್ನು ನಡೆಸಲಾಯಿತು.
ಪೆರ್ಲ ಪೇಟೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಡಿಟಿಸಿ ಕಾಸರಗೋಡು ವೈದ್ಯಾಧಿಕಾರಿ ಡಾ.ನಾರಾಯಣ ಪ್ರದೀಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಆಯಿμÁ ಎ.ಎ, ನಲಂದಾ ಕಾಲೇಜಿನ ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್ ರೈ, ಎನ್ನೆಸ್ಸಸ್ ಸಂಯೋಜನಾಧಿಕಾರಿ ಪ್ರಜೀತ್, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಕುಟುಂಬ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ.ಕ್ರಿಸ್ಟಿ ಇಸಾಬೆಲ್ ಡೇನಿಯಲ್ ಸ್ವಾಗತಿಸಿ ಹೆಲ್ತ್ ಇನ್ಸ್ ಫೆಕ್ಟರ್ ಸಜಿತ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಎನ್ನೆಸ್ಸಸ್ ವಿದ್ಯಾರ್ಥಿಗಳಿಂದ ಕ್ಷಯ ರೋಗ ನಿವಾರಣೆ ಬಗ್ಗೆ ಬೀದಿ ನಾಟಕ ಹಾಗೂ ನೃತ್ಯಾವಿμÁ್ಕರ ಜನ ಜಾಗೃತಿಯಾಗಿ ಮೂಡಿ ಬಂತು. ಬಳಿಕ ನಲಂದಾ ಕಾಲೇಜಿನಲ್ಲಿ ಕ್ಷಯ ರೋಗದ ನಿಯಂತ್ರಣಾ ಹಾಗೂ ರೋಗ ಲಕ್ಷಣಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಡಾ.ನಾರಾಯಣ ಪ್ರದೀಪ್ ನಡೆಸಿಕೊಟ್ಟರು.