ಉತ್ತರ ಕಾಶಿ : ಉತ್ತರಾಖಂಡದ ಉತ್ತರಕಾಶಿಯಲ್ಲಿ ಭಾನುವಾರ ಮಧ್ಯರಾತ್ರಿ ರಿಕ್ಟರ್ ಮಾಪಕದಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಬಳಿಕ ಮತ್ತೆ ಎರಡು ಬಾರಿ ಭೂಮಿ ಕಂಪಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ 12.45ಕ್ಕೆ ಮೊದಲ ಬಾರಿ ಭೂಮಿ ಕಂಪಿಸಿದಾಗ ಅದರ ಕೇಂದ್ರಬಿಂದು ಭಟವರಿ ಪ್ರದೇಶದ ಸಿರೋರ್ ಅರಣ್ಯ ಪ್ರದೇಶದಲ್ಲಿತ್ತು. ಮತ್ತೆ ಎರಡು ಬಾರಿ ಭೂಮಿ ಕಂಪಿಸಿತು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ತಿಳಿಸಿದ್ದಾರೆ.
ಕಂಪನದಿಂದ ಮನೆಗಳು ಅದುರಿವೆ. ಆದರೆ ಯಾವುದೇ ಹಾನಿಯಾದ ವರದಿಯಾಗಿಲ್ಲ. ಜನರು ಭಯದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದು, ರಾತ್ರಿ ಹೊರಗಡೆಯೇ ಉಳಿಯುವಂತಾಯಿತು.