ಕಾಸರಗೋಡು: ಕಿವುಡುತನ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ(ಎನ್‍ಪಿಪಿಸಿಡಿ) ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜಂಟಿ ಆಶ್ರಯದಲ್ಲಿ ಕಾಞಂಗಾಡು ಜಿಲ್ಲಾಸ್ಪತ್ರೆಯ ರಾಷ್ಟ್ರೀಯ ಆರೋಗ್ಯ ಮಿಷನ್ ಕಾನ್ಫರೆನ್ಸ್ ಹಾಲ್‍ನಲ್ಲಿ ಜರುಗಿತು. ಜಿಲ್ಲಾ ಆಸ್ಪತ್ರೆ ಇ. ಎನ್ ಟಿ ಕನ್ಸಲ್ಟೆಂಟ್ ಸರ್ಜನ್, ಎನ್ ಪಿಪಿಸಿಡಿ ನೋಡಲ್ ಅಧಿಕಾರಿ ಡಾ.ನಿತ್ಯಂದ ಬಾಬು ಸಿ.ಕೆ. ಉದ್ಘಾಟಿಸಿದರು. ಜಿಲ್ಲಾ ಆಸ್ಪತ್ರೆಯ ಉಪ ಅಧೀಕ್ಷಕ ಡಾ. ಚಂದ್ರಮೋಹನ ಇ.ವಿ ಅಧ್ಯಕ್ಷತೆ ವಹಿಸಿದ್ದರು.
ಶ್ರವಣ ರಕ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕಿವುಡುತನ ನಿಯಂತ್ರಣ ಕಾರ್ಯಕ್ರಮದ ಆರೋಗ್ಯ ಕಾರ್ಯಕರ್ತರು ಸಿದ್ಧಪಡಿಸಿರುವ "ಜಾಗ್ರತೆ" ಕಿರುಚಿತ್ರವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕ್ರಮ ನಿರ್ವಾಹಕ ಡಾ. ರಿಜಿತ್ ಕೃಷ್ಣನ್ ಬಿಡುಗಡೆಗೊಳಿಸಿದರು. ಶ್ರವಣದೋಷವುಳ್ಳವರ ಸಮಸ್ಯೆಗಳನ್ನು ಬಿಂಬಿಸುವ ಚಿತ್ರದಲ್ಲಿ ರಾಹುಲ್ ರಾಜೀವ್, ಕಾವ್ಯ ಕೆ ಆನಂದಿ ಮತ್ತು ಶ್ರೀಜಿತ್ ಕರಿವೇಲಿ ನಟಿಸಿದ್ದಾರೆ.
ಕಾಞಂಗಾಡು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಪ್ರಕಾಶ್ ಕೆ.ವಿ, ಉಪ ಜಿಲ್ಲಾ ಶಿಕ್ಷಣ ಮಾಧ್ಯಮ ಅಧಿಕಾರಿ ಸಯನಾ ಎಸ್, ರಾಷ್ಟ್ರೀಯ ಆರೋಗ್ಯ ಮಿಷನ್ ಎಂಡೋಸಲ್ಫಾನ್ ಪುನರ್ವಸತಿ ಯೋಜನೆಯ ಆಡಳಿತಾಧಿಕಾರಿ ಗಂಗಾದರನ್ ಕೆ ಮತ್ತು ಎನ್‍ಎಚ್‍ಎಂಐಇಸಿಬಿಸಿಬಿಸಿ ಸಲಹೆಗಾರ ಕಮಲ್ ಕೆ ಜೋಸ್ ಉಪಸ್ಥಿತರಿದ್ದರು. ಆರೋಗ್ಯ ಕಾರ್ಯಕರ್ತರಿಗಾಗಿ ಎಂಎಲ್‍ಎಸ್‍ಪಿ ನಡೆಸಿದ ಜಾಗೃತಿ ವಿಚಾರ ಸಂಕಿರಣದಲ್ಲಿ ಶ್ರವಣಶಾಸ್ತ್ರಜ್ಞರಾದ ರಾಹುಲ್ ಎನ್, ಸ್ನೇಹಾ ಸೆಬಾಸ್ಟಿಯನ್, ಸನಲ್ ಕುಮಾರಿ, ಕಾವ್ಯ ಕೆ ಆನಂದಿ ಮತ್ತು ಅಜಿಶ್ ಕುಮಾರ್ ತರಗತಿ ನಡೆಸಿದರು.
ಕಾಞಂಗಾಡು ಜಿಲ್ಲಾಸ್ಪತ್ರೆ ವತಿಯಿಂದ ವಿಶ್ವ ಶ್ರವಣ ದಿನಾಚರಣೆ
0
ಮಾರ್ಚ್ 04, 2023
Tags