ಕಾಸರಗೋಡು: ಬೆಳಗಾವಿಯಲ್ಲಿ ನಡೆಯಲಿರುವ ಅಖಿಲ ಕರ್ನಾಟಕ 13ನೇ ರಾಜ್ಯಮಟ್ಟದ ಗಮಕ ಕಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ `ಕರ್ನಾಟಕ ಕಲಾಶ್ರೀ' ಗಮಕಿ ಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟ ಅವರು ಆಯ್ಕೆಯಾಗಿದ್ದಾರೆ. ಮೂಲತಃ ಕಾಸರಗೋಡಿನ ಕಾರಡ್ಕ ಗ್ರಾಮದ ತೆಕ್ಕೆಕೆರೆಯವರಾದ ಇವರು ಕವಿ, ಗಮಕಿ ಮತ್ತು ಸಾಹಿತಿಯಾಗಿ ನಾಡಿನಾದ್ಯಂತ ಪರಿಚಿತರು. ಚಿತ್ರದುರ್ಗ, ಮೈಸೂರು ಮತ್ತು ಮಂಗಳೂರು ಆಕಾಶವಾಣಿಯಿಂದ ಇವರ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ಬಿ.ಎಸ್.ಎನ್.ಎಲ್. ಉದ್ಯೋಗಿಯಾಗಿದ್ದು ನಿವೃತ್ತರಾದ ಇವರು 1984 ರಿಂದ ಗಮಕ ಕಲಾಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂಬೈ ಹಾಗೂ ನವದೆಹಲಿಯಲ್ಲಿಯೂ ಇವರ ಗಮಕ ಕಾರ್ಯಕ್ರಮಗಳು ನಡೆದಿವೆ. ಕಾಸರಗೋಡು ಮತ್ತುದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಗಮಕಕಲಾಪ್ರಚಾರಕ್ಕೆ ಆದ್ಯತೆಯನ್ನು ಕೊಟ್ಟು ಶ್ರಮಿಸಿದ್ದಾರೆ. ಕರ್ನಾಟಕಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ.
ರಾಜ್ಯಮಟ್ಟದ ಗಮಕ ಕಲಾ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ
0
ಮಾರ್ಚ್ 23, 2023