ಆಲಪ್ಪುಳ: ತಮ್ಮ ಮನೆಗೆ ಆಗಮಿಸಿರುವ ಹೊಸ ಅತಿಥಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಜಾಲತಾಣದಲಲಿ ಪರಿಚಯಿಸಿದರು. ಸುರೇಂದ್ರನ್ ತಮ್ಮ ಮನೆಗೆ ನೂತನವಾಗಿ ಆಗಮಿಸಿರುವ ಹೊಸ ಅತಿಥಿ ಕರುವ ಚಿತ್ರ ಹಂಚಿಕೊಂಡಿದ್ದಾರೆ.
ಸುರೇಂದ್ರನ್ ಕರುವಿನ ಜೊತೆಗಿನ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಕೆಲವೇ ಸೆಕೆಂಡ್‍ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.
ಸುರೇಂದ್ರನ್ ಅವರ ಪತ್ನಿಯೂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಳೆಗರು ಮನೆ ಸುತ್ತ ಓಡುವ ಚಿತ್ರಗಳು ಆಕರ್ಷಕವಾಗಿದೆ. ಸುರೇಂದ್ರನ್ ಹಂಚಿಕೊಂಡಿರುವ ಚಿತ್ರಗಳ ಕೆಳಗೆ ಹಲವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸುರೇಂದ್ರನ್ ಅವರು ಹಸುಗಳು ಮತ್ತು ಕರುಗಳೊಂದಿಗಿನ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
'ಮನೆಗೆ ಬಂದಿದೆ ಹೊಸ ಅತಿಥಿ': ಚಿತ್ರಗಳನ್ನು ಹಂಚಿಕೊಂಡ ಕೆ.ಸುರೇಂದ್ರನ್
0
ಮಾರ್ಚ್ 05, 2023