ಪೆರ್ಲ :ವಿಶ್ವ ಹಿಂದೂ ಪರಿಷತ್ ಪೆರ್ಲ ಘಟಕದ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಅದ್ಧೂರಿ ಕಬಡ್ಡಿ ಪಂದ್ಯಾವಳಿ, ಸಾಂಸ್ಕøತಿಕ ಕಾರ್ಯಕ್ರಮ ಏ. 15ರಂದು ಬಜಕೂಡ್ಲು ಮಿನಿ ಸ್ಟೇಡಿಯಮ್ ನಲ್ಲಿ ಜರುಗಲಿದೆ.
ಅಂದು ಸಂಜೆ ಗಂಟೆ 7 ರಿಂದ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈಭವ, ರಾತ್ರಿ 9 ಗಂಟೆಗೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಜ್ಯ ಮತ್ತು ಅಂತಾರಾಜ್ಯ ಮಟ್ಟದ ಆಯ್ದ ಒಟ್ಟು 16 ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದೆ.
ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಸದಾಶಿವ ಭಟ್ ಹರಿನಿಲಯ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಕುದ್ವ, ಉಪಾಧ್ಯಕ್ಷರುಗಳಾಗಿ ರಾಧಾಕೃಷ್ಣ ಆಳ್ವ ಪೂವನಡ್ಕ, ಶ್ಯಾಮ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕುಲಾಲ್ ನಲ್ಕ, ಕಾರ್ಯದರ್ಶಿಗಳಾಗಿ ಅಶೋಕ ಪೆರ್ಲ, ಸತೀಶ್ ರೈ ಕುದ್ವ, ಕೋಶಾಧಿಕಾರಿಗಳಾಗಿ ಸುಜಿತ್ ರೈ ಬಜಕೂಡ್ಲು, ಚಂದ್ರಶೇಖರ ಮತ್ತು ಕ್ರೀಡಾ ಕೂಟದ ಸಂಚಾಲಕರಾಗಿ ಗಿರೀಶ್ ರೈ ಕಾಟುಕುಕ್ಕೆ ಸಹಸಂಚಾಲಕರಾಗಿ ವಿನೋದ್ ರೈ ಬಜಕೂಡ್ಲು ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಪೆರ್ಲ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ಬದಿಯಡ್ಕ ಪ್ರಖಂಡ ಅಧ್ಯಕ್ಷ ಹರೀಶ್ ಪುತ್ರಕಳ, ಕಾರ್ಯದರ್ಶಿ ಮಂಜುನಾಥ್ ಮಾನ್ಯ, ಬಜರಂಗದಳ ಬದಿಯಡ್ಕ ಪ್ರಖಂಡ ಸಹಸಂಯೋಜಕ್ ಪ್ರದೀಪ್ ಪೆರಿಯಾಲ್, ವಿಶ್ವ ಹಿಂದೂ ಪರಿಷತ್ ಎಣ್ಮಕಜೆ ಪಂಚಾಯತ್ ಘಟಕದ ಅಧ್ಯಕ್ಷ ಉದಯ ಚೆಟ್ಟಿಯಾರ್ ಬಜಕೂಡ್ಲು ಉಪಸ್ಥಿತರಿದ್ದರು.
ವಿಶ್ವಹಿಂದೂಪರಿಷತ್ ಪೆರ್ಲ ಘಟಕದಿಂದ ಅದ್ದೂರಿ ಕಬಡ್ಡಿ ಪಂದ್ಯಾಟ, ಸಾಂಸ್ಕøತಿಕ ವೈವಿಧ್ಯ
0
ಮಾರ್ಚ್ 02, 2023
Tags