ತ್ರಿಶೂರ್: ಕಾಂಗ್ರೆಸ್ ಮತ್ತು ಸಿಪಿಎಂ ಎಲ್ಲಡೆ ಪೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ಪಾಪ್ಯುಲರ್ ಫ್ರಂಟ್ ನಿಷೇಧವನ್ನು ಇವೆರಡೂ ಪಕ್ಷÀ ಬೆಂಬಲಿಸಲಿಲ್ಲ. ತಮ್ಮ ಮತ ಬ್ಯಾಂಕ್ ಕಳೆದುಕೊಳ್ಳುವ ಭಯದಲ್ಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಆ ಪಕ್ಷಗಳು ದರೋಡೆಕೋರರು ಮತ್ತು ದೇಶದ್ರೋಹಿಗಳೊಂದಿಗೆ ವ್ಯವಹರಿಸುವಾಗ ಬಿಜೆಪಿಗೆ ಪೋಟ್ ಬ್ಯಾಂಕ್ ಸಮಸ್ಯೆಯಲ್ಲ ಎಂದರು.
ತೃಶೂರ್ ತೇಕಿಂಕಡ್ ಮೈದಾನದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಬಿಜೆಪಿಯ ಜನಶಕ್ತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಎಡಪಕ್ಷಗಳು ಮತ ಬ್ಯಾಂಕ್‍ಗಾಗಿ ನಿಂತಿವೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ ಹಿಂಸಾಚಾರಕ್ಕೆ ಸ್ಪಂದಿಸದಿರುವುದು ಇದಕ್ಕೆ ಉದಾಹರಣೆ. ಆದರೆ ಇಂದು ಮೋದಿ ಸರಕಾರ ಭಯೋತ್ಪಾದಕರ ಮನೆಗೆ ನುಗ್ಗಿ ಸೇಡು ತೀರಿಸಿಕೊಳ್ಳುತ್ತಿದೆ. ಬಿಜೆಪಿಗೆ ಜನರು ಮತ್ತು ದೇಶ ಮುಖ್ಯ, ಮತ ಬ್ಯಾಂಕ್ ಅಲ್ಲ.
ಕೇರಳದ ಸಾರ್ವಜನಿಕ ಸಾಲ ಆತಂಕಕಾರಿಯಾಗಿ ಬೆಳೆಯುತ್ತಿದೆ. ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಬಿಜೆಪಿಯನ್ನು ಗೆಲ್ಲಿಸಬೇಕು. ತ್ರಿಪುರಾದಲ್ಲಿ ಉಳಿವಿಗಾಗಿ ಕೈಕಟ್ಟಿ ಹೋರಾಡಿದವರು ಕೇರಳದಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ವಿಡಂಬನೆಯಾಗಿದೆ. ಲೈಫ್ ಮಿಷನ್ ಹಗರಣ ಮತ್ತು ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಮಾಜಿ ಕಾರ್ಯದರ್ಶಿ ಕೂಡ ಬಂಧಿತರಾಗಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿಗಳು ಜನರ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆ ಹೊತ್ತಿದ್ದಾರೆ. ಈ ಪ್ರಶ್ನೆಗಳಿಗೆ 2024ರ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಕಾಂಗ್ರೆಸ್-ಸಿಪಿಎಂ ಪಕ್ಷಗಳಿಗೆ ಪೋಟ್ ಬ್ಯಾಂಕ್ ಭಯ; ಬಿಜೆಪಿಗೆ ಅದರ ಅಗತ್ಯವಿಲ್ಲ; ಪಿ.ಎಫ್.ಐ ನಿಷೇಧ ಮತ್ತು ಭಯೋತ್ಪಾದನೆ ನಿಗ್ರಹ ಉದಾಹರಣೆ: ಅಮಿತ್ ಶಾ
0
ಮಾರ್ಚ್ 13, 2023