ವಾಷಿಂಗ್ ಟನ್: ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಭಾರತೀಯ ಅಮೇರಿಕನ್ ನಟಿ, ನಿರ್ಮಾಪಕಿ ಮೈಂಡಿ ಕಲಿಂಗ್ ಗೆ ರಾಷ್ಟ್ರೀಯ ಮಾನವೀಯತೆ ಪದಕ ನೀಡಿ ಗೌರವಿಸಿದ್ದಾರೆ.
ಹೊಸ ಪೀಳಿಗೆಯ ಕಥೆಗಾರರಿಗೆ ಬೆಂಬಲ ನೀಡುತ್ತಿರುವುದನ್ನು ಗುರುತಿಸಿ ಶ್ವೇತ ಭವನದಲ್ಲಿ ರಾಷ್ಟ್ರೀಯ ಮಾನವೀಯತೆ ಪದಕ ನೀಡಿ ಗೌರವಿಸಲಾಗಿದೆ.
ನ್ಯಾಷನಲ್ ಮೆಡಲ್ ಆಫ್ ಆರ್ಟ್ಸ್ ಎಂಬುದು US ಸರ್ಕಾರದಿಂದ ಕಲಾವಿದರು, ಕಲಾ ಪೋಷಕರು ಮತ್ತು ಗುಂಪುಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ.
ಅಮೆರಿಕಾದಲ್ಲಿ ಕಲೆಗಳನ್ನು ಅಭಿವೃದ್ಧಿಪಡಿಸಿದ ಕಲಾವಿದರು ಮತ್ತು ಅವರ ವಿಶಿಷ್ಟ ಸಾಧನೆ, ಬೆಂಬಲ ಅಥವಾ ಪ್ರೋತ್ಸಾಹದ ಮೂಲಕ ಇತರರಿಗೆ ಸ್ಫೂರ್ತಿ ನೀಡಿದ ಅನುಕರಣೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಈ ಪ್ರಶಸ್ತಿಗಳ ಮೂಲಕ ಗೌರವಿಸಲಾಗುತ್ತದೆ.
ಅಮೇರಿಕದ ಪ್ರಥಮ ನಾರಿ ಜಿಲ್ ಬೈಡನ್, ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್, ಬೈಡನ್ ಇದ್ದ ಸಮಾರಂಭದಲ್ಲಿ ಮೈಂಡಿ ಕಲಿಂಗ್ ಗೆ ಪ್ರಶಸ್ತಿ ನೀಡಲಾಗಿದೆ.
ಪ್ರೈಮ್‌ಟೈಮ್ ಸಿಟ್‌ಕಾಮ್‌ನಲ್ಲಿ ರಚಿಸಲು, ಬರೆಯಲು ಮತ್ತು ನಟಿಸಿದ ಮೊದಲ ಬಿಳಿಯೇತರ ಮಹಿಳೆ ಎಂಬ ಹೆಗ್ಗಳಿಕೆಗೆ ಮೈಂಡಿ ಕಲಿಂಗ್ ಪಾತ್ರರಾಗಿದ್ದಾರೆ ಎಂದು ಬೈಡನ್ ಪ್ರಶಸ್ತಿ ಸಮಾರಂಭದಲ್ಲಿ ಹೇಳಿದ್ದಾರೆ.