ಕಾಸರಗೋಡು: ಕೇರಳ ಲಾಟರಿ ಏಜೆಂಟರು ಮತ್ತು ಮಾರಾಟಗಾರರ ಕಲ್ಯಾಣ ಮಂಡಳಿಯು ವಿಕಲಚೇತನರ ಕಲ್ಯಾಣ ಸದಸ್ಯರಿಗೆ ಉಚಿತವಾಗಿ ಯಾಂತ್ರೀಕೃತ ತ್ರಿಚಕ್ರ ವಾಹನಗಳನ್ನು ನೀಡುವ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರು ಜನವರಿ 1, 2022 ರ ಮೊದಲು ಕಲ್ಯಾಣ ನಿಧಿಯಲ್ಲಿ ಸದಸ್ಯತ್ವವನ್ನು ಪಡೆದವರಾಗಿರಬೇಕು ಮತ್ತು ಶೇ. 40 ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿದ್ದು 18 ರಿಂದ 60 ವರ್ಷ ವಯಸ್ಸಿನವರಾಗಿರಬೇಕು ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಕೇರಳ ರಾಜ್ಯ ಭಾಗ್ಯಕುರಿ ಕಲ್ಯಾಣ ನಿಧಿಂiÀಡಿ ಸಕ್ರಿಯ ಸದಸ್ಯರಾಗಿರಬೇಕು. ವಿಕಲಚೇತನರಾಗಿದ್ದು, ಪಡೆದಿರುವ ಡ್ರೈವಿಂಗ್ ಪರವಾನಗಿ ಯಾ ಲರ್ನರ್ಸ್ ಪರವಾನಗಿ ಹೊಂದಿರಬೇಕು. ಈ ಹಿಂದೆ ರಾಜ್ಯ ಲಾಟರಿ ಕಲ್ಯಾಣ ಮಂಡಳಿಯಿಂದ ಉಚಿತವಾಗಿ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು ಪಡೆದವರು ಮತ್ತು ಕಳೆದ ಏಳು ವರ್ಷಗಳಲ್ಲಿ ಸರ್ಕಾರದಿಂದ (ಸ್ಥಳೀಯಾಡಳಿತ ಸಂಸ್ಥೆ, ಅಂಗವಿಕಲರ ಕಲ್ಯಾಣ ನಿಗಮ ಮತ್ತು ಇತರ ಸರ್ಕಾರಿ ಸಂಸ್ಥೆಗಳು)ಯಾಂತ್ರೀಕೃತ ತ್ರಿಚಕ್ರ ವಾಹನಗಳನ್ನು ಪಡೆದವರು ರಾಜ್ಯ ಲಾಟರಿ ಕಲ್ಯಾಣ ಮಂಡಳಿಯಿಂದ ನೀಡುವ ತ್ರಿಚಕ್ರ ವಾಹನವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
ಅರ್ಜಿ ನಮೂನೆಯನ್ನು ಜಿಲ್ಲಾ ಲಾಟರಿ ಕಲ್ಯಾಣ ಕಛೇರಿಯಿಂದ ಪಡೆಯಬಹುದಾಗಿದೆ. ದೃಢೀಕರಿಸಿದ ಅರ್ಜಿಗಳನ್ನು ಜಿಲ್ಲಾ ಲಾಟರಿ ಕಲ್ಯಾಣ ಕಛೇರಿ ಕಾಸರಗೋಡು ಇವರಿಗೆ ಸಲ್ಲಿಸಬೇಕು. ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ಮಾರ್ಚ್ 20 ಆಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256404)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಲಾಟರಿ ತ್ರಿಚಕ್ರವಾಹನ ವಿತರಣಾ ಯೋಜನೆಗೆ ಅರ್ಜಿ ಆಹ್ವಾನ
0
ಮಾರ್ಚ್ 04, 2023