ಮಂಜೇಶ್ವರ: ಶ್ರೀ ಕಡಂಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ನೂಜಿ ಅಂಗನಿಮಾರು ಕೊಡ್ಲಮೊಗರುನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕೋತ್ಸವವು ಇತ್ತೀಚಿಗೆ ಜರಗಿದ್ದು,ಈ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಡ್ಲಮೊಗರು ವಹಿಸಿದ್ದರು. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರಿಧಾಮದ ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ವರ್ಕಾಡಿ ಹೊಸಮನೆ ರಾಜೇಶ ತಾಳಿತ್ತಾಯ, ಆಡಳಿತ ಸಮಿತಿ ಗೌರವಾಧ್ಯಕ್ಷ ರಾಮ ಮೂಲ್ಯ ನೂಜಿ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಕೇಶವ ಮಾಸ್ತರ್ ನೂಜಿ ಗೌರವ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಾವರ ಮಾಡ ಕ್ಷೇತ್ರದ ಅಣ್ಣದೈವ ಪಾತ್ರಿ ರಾಜ ಬೆಳ್ಚಪ್ಪಾಡ, ಸತೀಶ್ ಕುಮಾರ್ ಆಳ್ವ ಇರಾ ಮಡ್ವಬೀಡು, ಗ್ರಾಮಾಧಿಕಾರಿ ಶಂಕರ್ ಕುಂಜತ್ತೂರು, ವಿದ್ಯಾನಂದ ಸಾಮಾನಿ ಬಾಳೆಪುಣಿ ಗುತ್ರು, ವಿಶ್ವನಾಥ ಶೆಟ್ಟಿ ನಡಿಮಾರು, ಸತ್ಯನಾರಾಯಣ ಭಟ್ ಪಜ್ವ, ಬಾಲಕೃಷ್ಣ ದೀಕ್ಷಾ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಬಾಗ್ ಮೊದಲಾದವರು ಭಾಗವಹಿಸಿದ್ದರು.
ವರ್ಕಾಡಿ ಗ್ರಾ.ಪಂ.ಅಧ್ಯಕ್ಷೆ ಭಾರತಿ ಸತೀಶ್, ಸದಸ್ಯೆ ಆಶಾಲತಾ ಬೋಳ್ನ, ಜಿ.ಪಂ.ಸದಸ್ಯೆ ಕಮಲಾಕ್ಷಿ ವಿನೋದ್, ಯಮುನಾ ಪಿಲಿಕೂರು ಎರುಗುಂಡಿ, ಚಂದ್ರಹಾಸ ಶೆಟ್ಟಿ.ಕೆ ಪಾವಳಗುತ್ತು ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದಿನೇಶ್ ಮಾಸ್ತರ್ ಮಡ್ವ ಮಜಲು ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಪಜ್ವ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರದ ಪರಿಚಯ ನೀಡಿದರು. ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಸುಧೀರ್ ರಂಜನ್ ದೈಗೋಳಿ ಸ್ವಾಗತಿಸಿ, ಜೀರ್ಣೋದ್ದಾರ ಸಮಿತಿ ಜೊತೆ ಕಾರ್ಯದರ್ಶಿ ಚಂದ್ರಹಾಸ ಕಾನ ವಂದಿಸಿದರು. ಲೋಕೇಶ್ ಶೆಟ್ಟಿ ಕರ್ಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ನಾಟ್ಯ ವೈಭವ,ತುಳು ನಾಟಕ, ನೃತ್ಯ ವೈಭವ, ಗೀತಾ ಸಾಹಿತ್ಯ ಸಂಭ್ರಮ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು. ಅನ್ನ ಸಂತರ್ಪಣೆ ಹಾಗೂ ಶ್ರೀ ಕಡಂಗಲ್ಲಾಯ ಮತ್ತು ಪರಿವಾರ ದೈವಗಳಾದ ಗುಳಿಗ, ಪಂಜುರ್ಲಿ ಹಾಗೂ ಬಂಟ ದೈವಗಳ ನೇಮೋತ್ಸವದೊಂದಿಗೆ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕ ಸಂಪನ್ನಗೊಂಡಿತು.
ಅಂಗನಿಮಾರು ಕೊಡ್ಲಮೊಗರುನಲ್ಲಿ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ
0
ಮಾರ್ಚ್ 24, 2023