ಪೆರ್ಲ : ಪೆರ್ಲ ಸೇವಾ ಸಹಕಾರಿ ಬ್ಯಾಂಕ್‍ನ ಆಡಳಿತ ಸಮಿತಿಗೆ ನಿರ್ದೇಶಕರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಎಲ್ಲ 11ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸಂಸ್ಕಾರ ಭಾರತಿ ಪ್ರಬಲ ಪೈಪೋಟಿ ನೀಡಿದ್ದು, ವಿಜೇತ ಅಭ್ಯರ್ಥಿಗಳು ನೂರರಿಂದ ನೂರೈವತ್ತು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕೃಷ್ಣ ಬಂಗೇರ(1403), ನಾರಾಯಣ ಪ್ರಸಾದ್(1422), ಟಿ. ಪ್ರಸಾದ್(1437), ಎನ್. ರಮೇಶ್(1374), ಕೆ. ಶಿವಕುಮಾರ್(1363), ಶ್ಯಾಮಲಾ ಭಟ್(1403) ದೇವಿಕಾ ವೆಂಕಟೇಶ್(1438), ಕವಿತಾ ಬಿ(1429), ರೆಖಾಜ್ಯೋತಿ(1437), ವೆಂಕಟೇಶ ನಾಯ್ಕ್(1464), ವೈ. ವೆಂಕಟ್ರಮಣ ಭಟ್(1468)ಮತಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟು 23ಮಂದಿ ಸ್ಪರ್ಧಾಕಣದಲ್ಲಿದ್ದು, ಒಬ್ಬರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಕಳೆದ ಎರಡುವರೆ ದಶಕದಿಂದ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಆರೆಸ್ಸೆಸ್ ನೇತೃತ್ವದ ಸಹಕಾರ ಭಾರತಿ ವಶದಲ್ಲಿದ್ದು, ಇದೇ ಮೊದಲ ಬಾರಿಗೆ ಆಡಳಿತಾರೂಢ ಸಹಕಾರ ಭಾರತಿ ಜತೆಗೆ ಸಂಸ್ಕಾರ ಭಾರತಿ ಎಂಬ ಒಕ್ಕೂಟ ಚುನಾವಣಾ ಕಣಕ್ಕೆ ಧುಮುಕಿ ಪ್ರಬಲ ಪೈಪೋಟಿ ಒಡ್ಡಿತ್ತು. ಸಹಕಾರ ಭಾರತಿಯಿಂದ ಪೆರ್ಲ ಪೇಟೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು.
ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಚುನಾವಣೆ-ಸಹಕಾರ ಭಾರತಿಗೆ ಗೆಲುವು
0
ಮಾರ್ಚ್ 20, 2023